ಬೆಳ್ತಂಗಡಿ, ನ 11(SM): ನೋಟ್ಬ್ಯಾನ್ನಿಂದ ಕಾಂಗ್ರೇಸ್ ಪಕ್ಷ ದೀವಾಳಿಯಾಗಿದೆಯೇ ಹೊರತು ಜನಸಾಮಾನ್ಯರಿಗೆ ಇದರಿಂದ ತೊಂದರೆಯಾಗಿಲ್ಲ. ಪ್ರಧಾನಿ ನರೇಂದ್ರ ಮೋದಿಯವರ ಸಮರ್ಥ ಆಡಳಿತದಿಂದಾಗಿ ದೇಶದ ಆರ್ಥಿಕತೆ ವೇಗ ಪಡೆದುಕೊಂಡಿದೆ ಎಂದು ಬಿಜೆಪಿ ನಾಯಕ್ ಪ್ರತಾಪಸಿಂಹ ನಾಯಕ್ ವ್ಯಂಗ್ಯವಾಡಿದ್ದಾರೆ.
ನೋಟು ಅಮಾನ್ಯೀಕರಣದಿಂದಾಗಿ ಕಪ್ಪು ಹಣ ಹೊಂದಿದವರಿಗೆ ಭ್ರಷ್ಟಾಚಾರಿಗಳಿಗೆ, ಭಯೋತ್ಪಾದಕರಿಗೆ, ಅಪಾರ ತೊಂದರೆ ಉಂಟಾಗಿದೆಯೇ ಹೊರತು ಜನಸಾಮಾನ್ಯರಿಗಲ್ಲ. ದೇಶದಲ್ಲೆಡೆ ಕಾಂಗ್ರೇಸ್ನ ಪ್ರಭಾವ ಕಡಿಮೆಯಾಗುತ್ತಿರುವುದು ಕಾಂಗ್ರೇಸ್ನವರಲ್ಲಿ ಹತಾಶೆಯ ಮನೋಭಾವ ಮೂಡಿಸುತ್ತಿದೆ. ಗಾಂಧಿಯ ಹೆಸರಿನಲ್ಲಿ ಕುಟುಂಬ ರಾಜಕೀಯಕ್ಕೆ ಅಂಟಿಕೊಂಡಿರುವ ಕಾಂಗ್ರೇಸ್ ನಾಯಕತ್ವ ದೀವಾಳಿತನಕ್ಕೆ ಒಳಗಾಗಿದೆ.
ಅಸ್ಥಿತ್ವಕ್ಕಾಗಿ ಆತ್ಮಾಭಿಮಾನವನ್ನು ಬಿಟ್ಟು ಸಣ್ಣ ಪಕ್ಷಗಳೊಂದಿಗೆ ಸೇರಿಕೊಂಡು ಮಾಡುತ್ತಿರುವ ಅವಕಾಶವಾದಿ ರಾಜಕಾರಣ ನೋಡಿದರೆ ಕಾಂಗ್ರೇಸ್ ಪಕ್ಷವು ಕಣ್ಮರೆಯಾಗುವ ದಿನ ದೂರವಿಲ್ಲ. ದೀಪ ಆರುವ ಮುನ್ನಒಮ್ಮೆಲೆ ಜ್ವಾಲೆ ಎದ್ದು ಹೇಗೆ ನಂದಿ ಹೋಗುತ್ತದೆಯೋ ಅದೇರೀತಿ ಕಾಂಗ್ರೇಸ್ನ ಸ್ಥಿತಿ ಆಗಿದೆ ಎಂದು ವ್ಯಂಗ್ಯವಾಡಿದರು.