ಮಂಗಳೂರು, ನ 12 (MSP): ಸಾವಿನ ಸುದ್ದಿಯಲ್ಲಿಯೂ ವಿಕೃತ ಆನಂದ ಮೆರೆದಿದ್ದಾರೆ. ಹೌದು ಇಂದು ನಿಧನರಾದ ಕೇಂದ್ರ ಸಚಿವ ಅನಂತ್ ಕುಮಾರ್ ಸಾವಿನ ಬಗ್ಗೆ ಮಂಗಳೂರು ಮುಸ್ಲಿಂ ಪೇಜ್ ಫೇಸ್ ಬುಕ್ ಪೇಜ್ ನಲ್ಲಿ ಅವಹೇಳನಕಾರಿಯಾಗಿ ಪೋಸ್ಟ್ ಹಾಕಿ ವಿಕೃತಾನಂದವನ್ನು ಮೆರೆದಿದ್ದಾರೆ.
ಅನಂತ್ ಕುಮಾರ್ ಬಗ್ಗೆ ಅವಹೇಳನ ಕಾರಿ ಬರಹ ಪ್ರಕಟಿಸಿದ ಮಂಗಳೂರು ಫೇಸ್ ಬುಕ್ ಪೇಜ್ ನಲ್ಲಿ ಜಾತಿ ರಾಜಕಾರಣ ಕುತಂತ್ರಿ ಬ್ರಾಹ್ಮಣ ಅನಂತಕುಮಾರ್ ಮೇಲೆ ಹೋಗಿ ಯೂ ಜಾತಿ ವಿಷ ಬಿತ್ತ ಬೇಡ ಎಂದು ಬರೆದು ಮುಸ್ಲಿಂ ಪೇಜ್ ನ ವಿಕೃತ ಮನಸ್ಸುಗಳು ವಿಕೃತಿ ಮೆರೆದಿದ್ದಾರೆ.