ಛತ್ತೀಸ್ ಗಢ,ನ 12 (MSP): ನಕ್ಸಲರ ಬೆದರಿಕೆಯ ನಡುವೆ ಛತ್ತೀಸ್ ಗಢ ವಿಧಾನಸಭೆಯ ಮೊದಲ ಹಂತದ ಚುನಾವಣೆ ಆರಂಭಗೊಂಡಿದ್ದು, ಚುನಾವಣೆ ಪ್ರಾರಂಭಗೊಂಡ ಕೆಲವೇ ನಿಮಿಷಗಳಲ್ಲಿ ನಕ್ಸಲರು ದಂತೇವಾಡದಲ್ಲಿ ಐಇಡಿಯನ್ನು ಸ್ಫೋಟಿಸಿದ್ದಾರೆ. ಆದರೆ ಈ ಸ್ಪೋಟದಿಂದ ಯಾವುದೇ ಸಾವು ನೋವು ಸಂಭವಿಸಿಲ್ಲ ಎಂದು ವರದಿಯಾಗಿದೆ.
ದಂತೇವಾಡದ ಕಾಟೆಕಲ್ಯಾಣ್ ಬ್ಲಾಕ್ ನಲ್ಲಿರುವ ತುಮಾಕ್ಪಾಲ್ ಕ್ಯಾಂಪ್ ಬಳಿ ನಕ್ಸಲರು 1-2 ಕಿ.ಮೀ ದೂರದಲ್ಲಿ ಐಇಡಿ ಸ್ಫೋಟಿಸಿದ್ದಾರೆಂದು ಮಾಹಿತಿ ಲಭ್ಯವಾಗಿದೆ. ಛತ್ತೀಸ್ ಗಢ್ ವಿಧಾನಸಭೆ ಚುನಾವಣೆಯ ಮೊದಲ ಹಂತದಲ್ಲಿ ಚುನಾವಣೆಯಲ್ಲಿ ನಕ್ಸಲ್ ಪೀಡಿತ 8 ಜಿಲ್ಲೆಗಳ 18 ವಿಧಾನಸಭಾ ಕ್ಷೇತ್ರಗಳಲ್ಲಿ ಮತದಾನ ಆರಂಭಗೊಂಡಿದ್ದು, ಮೊದಲ ಹಂತದಲ್ಲಿ 31.79 ಲಕ್ಷ ಮತದಾರರು ಮತ ಚಲಾಯಿಸಲಿದ್ದಾರೆ.
ಮೊದಲ ಹಂತದಲ್ಲಿ ಮುಖ್ಯಮಂತ್ರಿ ರಮಣ್ ಸಿಂಗ್ ಸ್ಪರ್ಧಿಸಿರುವ ರಾಜನಂದಗಾಂವ್ ಕ್ಷೇತ್ರದ ಮೇಲೆ ತೀವ್ರ ಕುತೂಹಲವಿದೆ. ಕಾರಣ ಇಲ್ಲಿ ಕಾಂಗ್ರೆಸ್ಸಿನಿಂದ ಅಟಲ್ ಬಿಹಾರಿ ವಾಜಪೇಯಿ ಅವರ ಸೊಸೆ ಕರುಣಾ ಶುಕ್ಲಾ ಅಭ್ಯರ್ಥಿಯಾಗಿದ್ದಾರೆ.