ಬಂಟ್ವಾಳ, ನ 12 (MSP): ಆಯುಷ್ಯ ಎನ್ನುವುದು ಯಾರಿಗೆ ಎಷ್ಟಿದೆ ಎನ್ನುವುದು ಯಾರಿಗೂ ಗೊತ್ತಿಲ್ಲ.! ಆದರೆ ಇಲ್ಲೊಬ್ಬರು ಅಜ್ಜಿ ಇದ್ದಾರೆ ಇವರ ವರ್ಷ ಕೇಳಿದ್ರೆ ನಿಜಕ್ಕೂ ಅಚ್ಚರಿಯಾಗಬಹುದು. ಕಾರಣ ತನ್ನ ಬದುಕಿನಲ್ಲಿ ನೂರು ವಸಂತಗಳನ್ನು ಕಳೆದಿರುವ ಅಜ್ಜಿ ಅರೋಗ್ಯವಂತಾರಾಗಿದ್ದು ಯುವಕರನ್ನು ನಾಚಿಸುವಂತಿದ್ದಾರೆ.
ಹೌದು ಈ ಶತಾಯುಷಿ ಅಜ್ಜಿಯ ಹೆಸರು ನೀಲು ಹೆಂಗ್ಸು ಇವರು ನೂರಾ ಐದು ವರ್ಷಗಳನ್ನು ದಾಟಿ ನೂರ ಆರನೇ ವರ್ಷಕ್ಕೆ ಪಾದಾರ್ಪಣೆ ಮಾಡುತ್ತಿದ್ದಾರೆ. ಬಂಟ್ವಾಳ ತಾಲೂಕಿನ ನರಿಕೊಂಬು ಗ್ರಾಮದ ನಾಯಿಲ ಕಾಪಿಕಾಡು ದಿ.ರಾಮ ಮೂಲ್ಯ ಅವರ ಪತ್ನಿಯೇ ಶತಾಯುಷಿ ಅಜ್ಜಿ. ಇವರಿಗೆ ಮೂರು ಮಕ್ಕಳು ಇಬ್ಬರು ಗಂಡು ಹಾಗೂ ಒಂದು ಹೆಣ್ಣು. ಆದರೆ ದುರದೃಷ್ಟಾವಶಾತ್ ಮೂರು ಮಕ್ಕಳು ಅನಾರೋಗ್ಯದಲ್ಲಿ ವಿಧಿವಶರಾಗಿದ್ದಾರೆ. ಮೊದಲನೆಯ ಪುತ್ರ ಪದ್ಮನಾಭ ಅವರು ಕ್ಯಾನ್ಸರ್ ರೋಗದಿಂದ ಕಳೆದ ಮೂರು ವರ್ಷಗಳ ಹಿಂದೆ ಮೃತಪಟ್ಟರೆ ಎರಡನೆಯ ಪುತ್ರ ಉಮೇಶ್ ಮೂಲ್ಯ ಅವರು ಲಿವರ್ ಸಮಸ್ಯೆ ಯಿಂದ ಸಾವನಪ್ಪಿದರೆ ಮಗಳು ಶಾರದಾ ಅವರು ಹೃದಯಘಾತದಿಂದ ಮೃತಪಟ್ಟಿದ್ದಾರೆ.
ಈ ಶತಾಯುಷಿ ಅಜ್ಜಿ ಕುಟುಂಬಕ್ಕೆ ಹಿರಿಯ ಚೇತನರಾಗಿ ಬುದ್ದಿ ಮಾತು ಹೇಳುತ್ತಾ, ಮರಿ ಮಕ್ಕಳ ಆರೈಕೆ ಮಾಡುತ್ತಾ ಕಾಲಕಳೆಯುತ್ತಿದ್ದಾರೆ ಆದ್ಯತೆ ಯಾಗಿದೆ. ಇವರ ಹಿರಿ ಮಗ ಪದ್ಮನಾಭ ಅವರ ಪುತ್ರ ಜಗದೀಶ್ ಅವರ ಮನೆಯಲ್ಲಿ ಮೊಮ್ಮಗನ ಪ್ರೀತಿಯ ಸಂಸಾರದ ಜೊತೆ ಸಂತೃಪ್ತಿಯ ಜೀವನ ನಡೆಸುತ್ತಿದ್ದಾರೆ.