ಮಂಗಳೂರು, ನ 12(SM): ಕೇಂದ್ರದ ಸಚಿವ ಬಿಜೆಪಿ ನಾಯಕ ಅನಂತ್ಕುಮಾರ್ ನಿಧನಕ್ಕೆ ವಿಕೃತ ಸಂತೋಷ ಅನುಭವಿಸುವುದಕ್ಕಾಗಿ ಫೇಸ್ ಬುಕ್ ನಲ್ಲಿ ಮಂಗಳೂರು ಮುಸ್ಲಿಂ ಪೇಜ್ ಬರಹ ಪ್ರಕಟಿಸಿರುವುದರ ವಿರುದ್ಧ ಇದೀಗ ಪಾಂಡೇಶ್ವರ ಠಾಣಾ ಪೊಲೀಸರು ಸ್ವಯಂಪ್ರೇರಿತ ದೂರು ದಾಖಲಿಸಿಕೊಂಡಿದ್ದಾರೆ.
ಈ ಫೇಸ್ಬುಕ್ ಪೇಜ್ನಲ್ಲಿ ಕೋಮುವಾದಿ ಅನಂತಕುಮಾರ್ ಎಂದು ಬರೆದಿರುವುದಲ್ಲದೇ, ಹಲವು ವಿಕೃತ ರೀತಿಯ ಬರಹಗಳನ್ನು ಹಾಕಲಾಗಿದೆ. ಇದೀಗ ಪೇಜ್ ವಿರುದ್ಧ ಪೊಲೀಸರು ಸ್ವಯಂಪ್ರೇರಿತ ಪ್ರಕರಣ ದಾಖಲಿಸಿಕೊಂಡಿದ್ದಾರೆ.
ಕೇಂದ್ರ ಸಚಿವ ಅನಂತ್ ಕುಮಾರ್ ವಿಧಿವಶರಾದ ಹಿನ್ನೆಲೆ ಮಂಗಳೂರು ಮುಸ್ಲಿಂ ಫೇಸ್ ಬುಕ್ ಪೇಜ್ ನಲ್ಲಿ ಅನಂತ್ ಕುಮಾರ್ ಅವರನ್ನು ನಿಂದಿಸಲಾಗಿತ್ತು. ಅನಂತ್ ಕುಮಾರ್ ಓರ್ವ ಕೋಮುವಾದಿಯಾಗಿದ್ದಾರೆ. ದೇಶದಲ್ಲಿ ಕೋಮುವಾದಿಯೊಬ್ಬರ ನಿಧನವಾಗಿದೆ ಎಂದು ನಿಂದಿಸಲಾಗಿತ್ತು.
ಜಾತಿ ಜಾತಿ ರಾಮ ರಾಮ ಅನ್ನುತ್ತಲೇ ಹೊಗೆ ಹಾಕಿ ಕೊಂಡ ಕೋಮುವಾದಿ ಅನಂತ್ ಕುಮಾರ್ ಎಂಬ ಬರಹ ಪ್ರಕಟಿಸಲಾಗಿದ್ದು, ದೇಶವನ್ನು ಹಾಳು ಮಾಡಲು ಮತ್ತೊಮ್ಮೆ ಹುಟ್ಟಿ ಬರಬೇಡ ಎಂದುವ್ಯಂಗ್ಯವಾದಂತಹ ಬರಹವನ್ನು ಫೇಸ್ ಬುಕ್ ಪೇಜ್ ನಲ್ಲಿ ಬರೆಯಲಾಗಿತ್ತು. ಈ ಬರಹಕ್ಕೆ ಮುಸ್ಲಿಂ ಮುಖಂಡರೂ ಸೇರಿದಂತೆ, ಬಿಜೆಪಿಯ ಪ್ರಮುಖರು ತೀವ್ರವಾಗಿ ವಿರೋಧಿಸಿದ್ದಾರೆ.