ಬೆಳಗಾವಿ,ನ 13(MSP): ರಾಜ್ಯಕ್ಕಾಗಿ ಟಿಪ್ಪು ತಾನು ಮಾತ್ರವಲ್ಲ, ತನ್ನ ಮಕ್ಕಳನ್ನು ಬಲಿದಾನ ಮಾಡಿದಾತ..ಇಂತಹ ಮಹಾನ್ ವ್ಯಕ್ತಿಯ ಜಯಂತಿಯನ್ನು ಕರ್ನಾಟಕದಲ್ಲಿ ಆಚರಿಸದೇ ಬೇರೆ ಕಡೆ ಆಚರಣೆ ಮಾಡಲಾದಿತೇ ಎಂದು ಎಂದು ಕನ್ನಡ ಮತ್ತು ಸಂಸ್ಕೃತಿ ಸಚಿವೆ ಜಯಮಾಲಾ ಪ್ರಶ್ನಿಸಿದ್ದಾರೆ.
ಟಿಪ್ಪು ಸುಲ್ತಾನ್ ಕರ್ನಾಟಕದಲ್ಲೇ ಹುಟ್ಟಿದಾದ, ಆತ ಬೆಳೆದಿದ್ದು ಆಡಳಿತ ನಡೆಸಿದ್ದು, ತನ್ನ ನೆಲಕ್ಕಾಗಿ ಹೋರಾಡಿದ್ದು ಕರುನಾಡಿನಲ್ಲಿ ಹೀಗಾಗಿ ಈತನ ಜಯಂತಿ ಕರ್ನಾಟಕದಲ್ಲಿ ಆಚರಿಸಿದೆ ಇನ್ನೆಲ್ಲಿ ಆಚರಿಸಬೇಕು ಎಂದು ಪತ್ರಕರ್ತರ ಪ್ರಶ್ನೆಗೆ ಉತ್ತರಿಸಿ ಮಾತನಾಡಿದರು.
ಟಿಪ್ಪು ಜಯಂತಿ ಆಚರಣೆಯ ವಿಷಯದಲ್ಲಿ ಕೆಲವರು ಬೇಕೆಂದೇ ವಿವಾದ ಸೃಷ್ಟಿಸುತ್ತಿದ್ದಾರೆ. ಚರಿತ್ರೆಯ ಪುಟಗಳನ್ನು ತಿರುವಿದರೆ ಎಲ್ಲಾ ರಾಜ, ಮಹಾರಾಜರು ಮತ್ತೊಬ್ಬರನ್ನು ರಾಜರನ್ನು ಕೊಂದು ತನ್ನ ಸಾಮ್ರಾಜ್ಯ ವಿಸ್ತರಿಸಿಕೊಂಡವರೇ..ಟಿಪ್ಪುವಿನ ಬಗ್ಗೆ ದಶಕಗಳ ಕಾಲ ಸಂಶೋಧನೆ ಮಾಡಿದವರು ಹಾಗೂ ಟಿಪ್ಪು ಜಯಂತಿ ಆಚರಣೆ ವಿರೋಧಿಸುವವರ ನಡುವೆ ಚರ್ಚೆಯಾಗಲಿ ಆಗ ಸತ್ಯ ತಿಳಿಯುತ್ತದೆ ಎಂದರು.
ಹಿಂದಿನ ಸರ್ಕಾರದಲ್ಲೂ ಟಿಪ್ಪು ಜಯಂತಿ ಆಚರಣೆ ಮಾಡಲಾಗಿತ್ತು. ಈ ಬಾರಿಯೂ ಮುಂದುವರಿಸಿದ್ದೇವೆ. ಕೇವಲ ಬಾಯಿ ಮಾತಿನಲ್ಲಿ ಹೇಳಲಿಲ್ಲ, ಅದನ್ನು ಸಾಧಿಸಿ ತೋರಿಸಿದ್ದೇವೆ ಎಂದು ಹೇಳಿದರು.