ಬೆಂಗಳೂರು, ನ 14 (MSP): ಟಿಪ್ಪು ಜಯಂತಿ ಕಾರ್ಯಕ್ರಮವನ್ನು ಕೈ ಬಿಡುವ ಪ್ರಶ್ನೆಯೇ ಇಲ್ಲ ಎಂದು ಮುಖ್ಯಮಂತ್ರಿ ಎಚ್ಡಿ ಕುಮಾರಸ್ವಾಮಿ ಖಡಕ್ ಆಗಿ ಹೇಳಿದ್ದಾರೆ. ನನಗೆ ಅನಾರೋಗ್ಯವಿದ್ದ ಕಾರಣ ಕಾರ್ಯಕ್ರಮದಲ್ಲಿ ಭಾಗವಹಿಸಿಲ್ಲ ಅಷ್ಟೇ. ಆದ್ರೆ ಜಯಂತಿ ಆಚರಿಸುವುದನ್ನು ಮಾತ್ರ ಯಾವುದೇ ಕಾರಣಕ್ಕೂ ನಿಲ್ಲಿಸುವುದಿಲ್ಲ ಎಂದು ಹೇಳಿದ್ದಾರೆ.
ನಗರದಲ್ಲಿ ಮಾಧ್ಯಮ ಪ್ರತಿನಿಧಿಗಳೊಂದಿಗೆ ಮಾತನಾಡಿದ ಅವರು, ಕಾಂಗ್ರೆಸ್ ಸರ್ಕಾರ ಪ್ರಾರಂಭಿಸಿದ ಟಿಪ್ಪು ಜಯಂತಿಯನ್ನು, ಸಮ್ಮಿಶ್ರ ಸರ್ಕಾರವೂ ಮುಂದುವರಿಸಿದೆ ಇನ್ನು ಕೂಡಾ ಮುಂದುವರಿಯುತ್ತದೆ. ಅದನ್ನು ನಿಲ್ಲಿಸುವ ಯಾವುದೇ ಯೋಚನೆ ನಮ್ಮಲಿಲ್ಲ. ಅನಾರೋಗ್ಯ ಕಾಡಿದ್ದರಿಂದ ನನಗೆ ವೈದ್ಯರು ವಿಶ್ರಾಂತಿ ಪಡೆಯುವಂತೆ ಸೂಚಿಸಿದ್ದರು. ಹಾಗಾಗಿ ಕಾರ್ಯಕ್ರಮ ಭಾಗವಹಿಸಿಲ್ಲ ಎಂದು ಸ್ಪಷ್ಟಪಡಿಸಿದರು. ಮುಖ್ಯಮಂತ್ರಿ ಆದವರು ಸರ್ಕಾರದ ಎಲ್ಲಾ ಕಾರ್ಯಕ್ರಮಗಳಲ್ಲೂ ಉಪಸ್ಥಿತರಿರಬೇಕು ಎನ್ನುವ ನಿಯಮವಿಲ್ಲ ಎಂದು ಅಸಮಧಾನದಿಂದಲೇ ಉತ್ತರಿಸಿದರು.
ಇದೇ ವೇಳೆ ಮುಂದಿನ ವರ್ಷಗಳಲ್ಲೂ ಟಿಪ್ಪು ಜಯಂತಿಯನ್ನು ಸಂಭ್ರಮದಿಂದಲೇ ಆಚರಿಸ್ತೀವಿ ಎನ್ನುವುದನ್ನು ಸ್ಪಷ್ಟಪಡಿಸಿದ ಅವರು ಟಿಪ್ಪು ಜಯಂತಿಯನ್ನು ವಿರೋಧಿಸುವ ಅಜೆಂಡಾವೇ ನಮ್ಮಲಿಲ್ಲ ಎಂದರು.