ಮಂಗಳೂರು, ನ 14(SM): ಎಂಡೋಸಲ್ಫಾನ್ ಸಂತ್ರಸ್ತರಿಗೆ ಸಮರ್ಪಕ ಸೌಲಭ್ಯ ದೊರಕದ ಹಿನ್ನೆಲೆ ಜಿಲ್ಲಾಧಿಕಾರಿ ಕಚೇರಿಯಲ್ಲಿ ನಡೆದ ಕರ್ನಾಟಕ ವಿಧಾನ ಪರಿಷತ್ ಸರಕಾರಿ ಭರವಸೆಗಳ ಸಮಿತಿ ಸಭೆಯಲ್ಲಿ ಬೆಳ್ತಂಗಡಿ ಶಾಸಕ ಹರೀಶ್ ಪೂಂಜಾ ಅಧಿಕಾರಿಗಳ ವಿರುದ್ಧ ಗರಂ ಆಗಿರುವ ಘಟನೆ ನಡೆದಿದೆ.
ಸಭೆ ಆರಂಭಗೊಂಡು ಕೆಲವೇ ಕ್ಷಣಗಳಲ್ಲಿ ಎಂಡೋ ಸಂತ್ರಸ್ತರಿಗೆ ಸಮರ್ಪಕ ಸೌಲಭ್ಯಗಳು ದೊರಕುತ್ತಿಲ್ಲ. ಹಾಗೂ ಸರಕಾರದಿಂದ ನೀಡುವ ಹೆಲ್ತ್ ಕಾರ್ಡ್ ಬಡವರಿಗೆ ದೊರಕುತ್ತಿಲ್ಲ ಎಂದು ಶಾಸಕರು ವಿಷಯ ಪ್ರಸ್ತಾಪಿಸಿದ್ದಾರೆ. ಈ ಬಗ್ಗೆ ಸಮಿತಿ ಅಧ್ಯಕ್ಷರಿಗೆ ಶಾಸಕರು ದೂರು ನೀಡಿದ್ದಾರೆ. ಈ ಸಂದರ್ಭದಲ್ಲಿ ಶಾಸಕರ ಪಕ್ಕದಲ್ಲೇ ಕುಳಿತಿದ್ದ ಸಮಿತಿ ಸದಸ್ಯರಾದ ಅಧಿಕಾರಿಯೊಬ್ಬರು ಸಮಿತಿಯ ಪರವಾಗಿ ಮಾತನಾಡಿದ್ದಾರೆ.
ಇದರಿಂದ ಕೆರಳಿದ ಶಾಸಕ ಹರೀಶ್ ಪೂಂಜಾ ಅಧಿಕಾರಿಯ ವಿರುದ್ಧ ಗರಂ ಆಗಿದ್ದಾರೆ. ಹಾಗೂ ಅಧಿಕಾರಿಯನ್ನು ತರಾಟೆಗೆ ತೆಗೆದುಕೊಂಡಿದ್ದಾರೆ. ನಾನು ಬಡವರ ಪರವಾಗಿ ವಾದಿಸುತ್ತಿದ್ದೇನೆ. ಆದರೆ ನೀವು ಯಾಕೆ ಸಮಿತಿಯ ಪರವಾಗಿ ಮಾತನಾಡುತ್ತಿದ್ದೀರಿ? ಬಡವರ ಪರವಾಗಿ ನಿಲ್ಲಿ ಎಂದು ಅಧಿಕಾರಿಗಳಿಗೆ ಶಾಸಕ ಹರೀಶ್ ಪೂಂಜಾ ಎಚ್ಚರಿಕೆ ನೀಡಿದ್ದಾರೆ.