ಸುರತ್ಕಲ್, ನ 15(MSP): ವಿಧಾನ ಪರಿಷತ್ ಸದಸ್ಯ ಬಿ.ಎಂ ಫಾರೂಕ್ ಪುತ್ರಿಯ ವಿವಾಹ ಸಮಾರಂಭ ಚಿಕ್ಕಬೆಟ್ಟು ಫಿಝಾ ಮೈದಾನದಲ್ಲಿ ನ.17 ರಂದು ನಡೆಯಲಿದ್ದು, ಸಮಾರಂಭದಲ್ಲಿ ಮುಖ್ಯಮಂತ್ರಿ ಎಚ್.ಡಿ ಕುಮಾರಸ್ವಾಮಿ ಸೇರಿ ಹಲವು ಗಣ್ಯರು, ಉದ್ಯಮಿಗಳು ಭಾಗವಹಿಸಲಿದ್ದಾರೆ.
ಕಾರ್ಯಕ್ರಮ ಹಿನ್ನಲೆಯಲ್ಲಿ ಚೊಕ್ಕಬೆಟ್ತುವಿಗೆ ಸುರತ್ಕಲ್ ಕಡೆಯಿಂದ ಬರುವ ಲಲಿತ್ ಹೊಟೇಲ್ ಬಳಿಯ ರಸ್ತೆ ಹೊಂಡಗುಂಡಿಗೆ ಡಾಂಬರು ಹಾಕಲಾಗಿದೆ. ಫಾರೂಕ್ ಅವರಿಗೆ ಸೇರಿದ ವಿಶಾಲ ಪಿಝಾ ಮೈದಾನದಲ್ಲಿಯೇ ವಿವಾಹ ಸಮಾರಂಭ ನಡೆಯಲಿದೆ, ಇಡೀ ಮೈದಾನಕ್ಕೆ ಸಾಂಪ್ರಾದಾಯಿಕ ಪೆಂಡಾಲ್ ವ್ಯವಸ್ಥೆ , ಮುಸ್ಲಿಂ ಮಹಿಳೆಯರಿಗೆ ಅಸನ ವ್ಯವಸ್ಥೆ ಮಾಡಲಾಗಿದೆ. ಇದು ಕರಾವಳಿಯ ಮುಸ್ಲಿಂ ಸಮುದಾಯದ ಇತಿಹಾಸದಲ್ಲೇ ತೆರೆದ ಮೈದಾನದಲ್ಲಿ ನಡೆಯುತ್ತಿರುವ ಮೊದಲ ಮದುವೆ ಸಮಾರಂಭ ಎನ್ನಲಾಗುತ್ತಿದೆ.