ನವದೆಹಲಿ, ನ 15(MSP): ನವದೆಹಲಿಯಲ್ಲಿ ನಡೆಯುವ 2019ನೇ ಸಾಲಿನ ಗಣರಾಜ್ಯೋತ್ಸವದ ಅದ್ದೂರಿ ಸಮಾರಂಭದ ಮುಖ್ಯ ಅತಿಥಿಯಾಗಿ, ಗಾಂಧಿವಾದಿಯಾದ ದಕ್ಷಿಣ ಆಫ್ರಿಕಾ ಆಧ್ಯಕ್ಷ ಸಿರಿಲ್ ರಮಫೊಸಾ ಅವರು ಬರುವುದು ಬಹುತೇಕ ಖಚಿತವಾಗಿದೆ. ಈ ಬಗ್ಗೆ ಕೇಂದ್ರ ಸರ್ಕಾರ ಮಾಹಿತಿಯನ್ನು ಹೊರಹಾಕಿದ್ದು, ಗಣರಾಜ್ಯೋತ್ಸವದ ಮುಖ್ಯ ಅತಿಥಿಯಾಗಿ ಆಗಮಿಸುವಂತೆ ಭಾರತ ಸರ್ಕಾರ ಮಾಡಿದ್ದ ಮನವಿಯನ್ನು ದಕ್ಷಿಣ ಆಫ್ರಿಕಾ ಆಧ್ಯಕ್ಷ ಸಿರಿಲ್ ರಮಫೊಸಾ ಅವರು ಸ್ವೀಕರಿಸಿದ್ದು, ಅವರು ಭಾರತಕ್ಕೆ ಆಗಮಿಸುವ ಆಶ್ವಾಸನೆ ನೀಡಿದ್ದಾರೆ ಎಂದು ತಿಳಿದು ಬಂದಿದೆ.
ಆಫ್ರಿಕಾದ ಗಾಂಧಿ ಎಂದೇ ಪ್ರಸ್ತಿದ್ದರಾಗಿರುವ ನೆಲ್ಸನ್ ಮಂಡೇಲಾ ಅವರ ಆತ್ಮೀಯರಾಗಿರುವ ಸಿರಿಲ್ ರಮಫೊಸಾ ಅವರನ್ನು ಖುದ್ದು ನೆಲ್ಸನ್ ಮಂಡೇಲಾ ಅವರು ದಕ್ಷಿಣ ಆಫ್ರಿಕಾದ ಅಧ್ಯಕ್ಷೀಯ ಗಾದಿಗೆ ಶಿಫಾರಸ್ಸು ಮಾಡಿದ್ದರು. ಇನ್ನು ಸಿರಿಲ್ ರಮಫೊಸಾ ಕೂಡ ಗಾಂಧಿವಾದಿಗಳಾಗಿದ್ದು, ಇದೇ ಹಿನ್ನಲೆಯಲ್ಲಿ ಭಾರತ ಕೂಡಾ ಅವರನ್ನು ಗಣರಾಜ್ಯೋತ್ಸವದ ಮುಖ್ಯ ಅತಿಥಿಯಾಗಿ ಆಗಮಿಸುವಂತೆ ಮನವಿ ಮಾಡಿತ್ತು ಎನ್ನಲಾಗಿದೆ.
ಇದಕ್ಕೂ ಮುನ್ನಾ ಭಾರತ ಸರ್ಕಾರ ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರಿಗೆ ಆಹ್ವಾನ ನೀಡಿತ್ತು, ಆದರೆ ಟ್ರಂಪ್ ಅವರ ವೇಳಾಪಟ್ಟಿ ಗೊಂದಲದ ಹಿನ್ನಲೆಯಲ್ಲಿ ವೈಟ್ ಹೌಸ್ ಭಾರತ ಸರ್ಕಾರದ ಮನವಿಯನ್ನು ತಿರಸ್ಕರಿಸಿತ್ತು.