ಮೈಸೂರು, ನ 15(MSP): ಮೊಬೈಲ್ ಕಳೆದು ಹೋಯಿತು ಎಂದು ನೊಂದುಕೊಂಡು ವಿದ್ಯಾರ್ಥಿನಿಯೊಬ್ಬಳು ನೇಣಿಗೆ ಶರಣಾಗಿರುವ ಘಟನೆ ಮೈಸೂರಿನಲ್ಲಿ ನಡೆದಿದೆ. ಮೃತ ವಿದ್ಯಾರ್ಥಿನಿಯನ್ನು ಮೈಸೂರು ಗಾಂಧಿನಗರದ ನಿವಾಸಿ ನಿಖಿತಾ (17) ಎಂದು ಗುರುತಿಸಲಾಗಿದೆ. ಈಕೆ ಮೈಸೂರು ಗಾಯತ್ರಿಪುರಂ ನಲ್ಲಿರುವ ಗಣಪತಿ ಸಚ್ಚಿದಾನಂದ ಶಾಲೆಯಲ್ಲಿ 10ನೇ ತರಗತಿಯಲ್ಲಿ ಓದುತ್ತಿದ್ದಳು..
ವಿದ್ಯಾರ್ಥಿನಿ ನೇಣಿಗೆ ಶರಣಾಗುವಾಗ ಮನೆಯಲ್ಲಿ ಯಾರು ಇರಲಿಲ್ಲ ಎನ್ನಲಾಗಿದೆ. ಇನ್ನು ವಿದ್ಯಾರ್ಥಿನಿ ಕೇವಲ ಮೊಬೈಲ್ ಕಳೆದುಹೋದದಕ್ಕೆ ಆತ್ಮಹತ್ಯೆ ಮಾಡಿಕೊಂಡಿದ್ದಾಳೆಯೇ ಅಥವಾ ಬೇರೆ ಯಾವುದಾದರೂ ನಿಖರ ಕಾರಣವಿರಬಹುದೇ ಎಂದು ಪೊಲೀಸರು ತನಿಖೆ ಮಾಡುತ್ತಿದ್ದಾರೆ. ವಿದ್ಯಾರ್ಥಿನಿ ಆತ್ಮಹತ್ಯೆ ಕುರಿತು ಎನ್.ಆರ್.ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.