ಮಂಗಳೂರು, ನ 16 (MSP): ಮದುವೆ ಎನ್ನುವುದು ಎಲ್ಲರ ಜೀವನದ ಪ್ರಮುಖ ಘಟ್ಟ. ಈ ಮದುವೆಯನ್ನು ಅತ್ಯಂತ ವಿಭಿನ್ನವಾಗಿ ಮಾಡಿಕೊಳ್ಳಬೇಕು ಎಂದು ಅದೆಷ್ಟೋ ಮಂದಿ ಯೋಚಿಸುತ್ತಾರೆ. ಆದರೆ ಅದು ಎಲ್ಲರಿಂದಲೂ ಸಾಧ್ಯವಾಗುವುದಿಲ್ಲ. ಹೀಗಾಗಿಯೇ ಮದುವೆಯ ಆಮಂತ್ರಣ ಪತ್ರಿಕೆಯನ್ನೂ ಅಥವಾ ವಿವಾಹವನ್ನೋ ವಿಭಿನ್ನವಾಗಿ ಮಾಡುವ ಟ್ರೆಂಡ್ ಇತ್ತೀಚೆಗೆ ಹೆಚ್ಚಾಗುತ್ತಿದೆ.
ಮದುವೆಯಲ್ಲಿ ಹಸಿರು ಬೆಳೆಸಿ ಎಂದು ಗಿಡಗಳನ್ನೋ , ಪುಸ್ತಕ ಓದಿ ಎಂದು ಪುಸ್ತಕವನ್ನು ನೀಡಿ ಅಥವಾ ರಕ್ತದಾನವನ್ನೋ ಮಾಡಿ ಖುಷಿ ಪಡುತ್ತಾರೆ. ಅಂತೆಯೇ ಇಲ್ಲೊಂದು ವಿವಾಹ ಅಮಂತ್ರಣ ಪತ್ರಿಕೆಯಲ್ಲಿ ಮದುವೆಯ ಕರೆಯೊಂದಿಗೆ ವಿನಂತಿಯೊಂದನ್ನು ಮಾಡಿಕೊಂಡಿದ್ದಾರೆ. "ಮೋದಿಗೆ ಮತ ಹಾಕಿದ್ರೆ ಅದೇ ವಧು ವರರಿಗೆ ನೀಡಿ ಉಡುಗೊರೆ " ಎಂದು ಆಮಂತ್ರಣದಲ್ಲಿ ಮುದ್ರಿಸಿದ್ದಾರೆ. ಈ ರೀತಿಯ ವಿವಾಹ ಆಮಂತ್ರಣವನ್ನು ಮುದ್ರಿಸಿದವರು ಸೋಮೇಶ್ವರ ನಿವಾಸಿಯಾಗಿ ಪ್ರವೀಣ್. ಇವರು ಇದೇ ಮುಂಬರುವ ಡಿ.31 ರಂದು ಕೇದಿಗೆ ನಿವಾಸಿ ಹೇಮಲತಾ ಅವರೊಂದಿಗೆ ದಾಂಪತ್ಯ ಜೀವನಕ್ಕೆ ಕಾಲಿಡಲಿದ್ದಾರೆ.
ಮದುವೆ ಕಾಗದದಲ್ಲಿ ಪ್ರಧಾನಿ ಮೋದಿ ಮೇಲಿನ ಅಭಿಮಾನವನ್ನು ಮೆರೆದು, ಮುಂಬರುವ ಲೋಕಸಭೆ ಚುನಾವಣೆಯಲ್ಲಿ ನರೇಂದ್ರ ಮೋದಿ ಪರ ಮತ ಚಲಾಯಿಸುವಂತೆ ಮದುವೆ ಕಾಗದಲ್ಲಿ ವಿನಂತಿಸಿದ್ದಾರೆ. ಅಲ್ಲದೆ ಕೇಂದ್ರ ಸರಕಾರ ವಿವಿಧ ಯೋಜನೆಗಳನ್ನು ಮದುವೆ ಕಾಗದಲ್ಲಿ ಮುದ್ರಿಸಿದ್ದಾರೆ. ಇದೀಗ ಇವರ ಮದುವೆ ಕರೆಯೋಲೆ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ.