ಕಾಸರಗೋಡು, ನ17(SS): ಶಬರಿಮಲೆ ಅಯ್ಯಪ್ಪನ ದರ್ಶನಕ್ಕಾಗಿ ಬಂದಿದ್ದ ಭೂಮಾತಾ ಬ್ರಿಗೇಡ್ ಮುಖ್ಯಸ್ಥೆ ತೃಪ್ತಿ ದೇಸಾಯಿ ದೇವರ ದರ್ಶನ ಕಾಣದೆ ಮಹಾರಾಷ್ಟ್ರಕ್ಕೆ ವಾಪಸಾಗಿದ್ದಾರೆ.
ಪುಣೆಯಿಂದ ಕೊಚ್ಚಿ ವಿಮಾನ ನಿಲ್ದಾಣಕ್ಕೆ 5 ಮಂದಿ ಬೆಂಬಲಿಗರೊಂದಿಗೆ ಶುಕ್ರವಾರ (ನ16) ಮುಂಜಾನೆ ತೃಪ್ತಿ ಆಗಮಿಸಿದ್ದರು. ಈ ವೇಳೆ ನಿಲ್ದಾಣದ ಹೊರಗಡೆ ಅಯ್ಯಪ್ಪ ಭಕ್ತರು ನಾಮಜಪ ಮೂಲಕ ಪ್ರತಿಭಟನೆ ನಡೆಸಿದ್ದರು. ಮಾತ್ರವಲ್ಲ, ತೃಪ್ತಿ ಹಾಗೂ ಬೆಂಬಲಿಗರು ನಿಲ್ದಾಣದಿಂದ ಹೊರಬರದಂತೆ ತಡೆ ಹಿಡಿದಿದ್ದರು. ಈ ಸಂದರ್ಭ ಪೊಲೀಸರು ತೃಪ್ತಿ ಅವರಿಗೆ ರಕ್ಷಣೆ ಒದಗಿಸಿದರೂ, ಅಲ್ಲಿಂದ ಸನ್ನಿಧಾನಕ್ಕೆ ತೆರಳಲು ಸಾಧ್ಯವಾಗಿರಲಿಲ್ಲ. ಅಯ್ಯಪ್ಪ ದರ್ಶನ ಮಾಡದೆ ಮಹಾರಾಷ್ಟ್ರಕ್ಕೆ ವಾಪಸಾಗುವುದಿಲ್ಲ ಎಂದು ಪಟ್ಟು ಹಿಡಿದಿದ್ದರು.
ಈ ವೇಳೆ ಪ್ರತಿಭಟನೆ ಹೆಚ್ಚಾಗುತ್ತಿದ್ದಂತೆ ತೃಪ್ತಿ ವಿಚಲಿತರಾಗಿದ್ದರು. ಮಾತ್ರವಲ್ಲ, ಪ್ರತಿಭಟನೆಗೆ ಮಣಿದು ತೃಪ್ತಿ ದೇಸಾಯಿ ಅಯ್ಯಪ್ಪ ದೇವರ ದರ್ಶನ ಕಾಣದೆ ಮಹಾರಾಷ್ಟ್ರಕ್ಕೆ ವಾಪಸಾಗಿದ್ದಾರೆ. ಮಾತ್ರವಲ್ಲ, ಮಂಡಲ ಪೂಜಾ ಮಹೋತ್ಸವ ಕೊನೆಗೊಳ್ಳುವ ಮೊದಲು ದರ್ಶನಕ್ಕೆ ಮತ್ತೊಮ್ಮೆ ಬರುವುದಾಗಿ ತೃಪ್ತಿ ಹೇಳಿದ್ದಾರೆ.
ಶಬರಿಮಲೆಯಲ್ಲಿ 41 ದಿನ ನಡೆಯುವ ಮಂಡಲ ಮಾಸ ಪೂಜಾ ಮಹೋತ್ಸವಕ್ಕಾಗಿ ಶುಕ್ರವಾರ ಗರ್ಭಗುಡಿ ಬಾಗಿಲು ತೆರೆಯಲಾಗಿದೆ. ದೇವಾಲಯದೊಳಗೆ ಮಹಿಳೆಯರ ಪ್ರವೇಶ ವಿರುದ್ಧ ನಿರೀಕ್ಷೆಯಂತೆ ಭಾರಿ ಪ್ರತಿಭಟನೆ ವ್ಯಕ್ತವಾಗಿದೆ.