ಮಂಗಳೂರು, ನ 18 (MSP): ಗೋವಾ ಸರ್ಕಾರ ಕರ್ನಾಟಕದ ಮೀನಿಗೆ ನಿಷೇಧ ಹೇರಿರುವ ಪರಿಣಾಮ ಮೀನುಗಾರರಿಗೆ ಸಮಸ್ಯೆಯಾಗಿದೆ. ಈ ಬಗ್ಗೆ ರಾಜ್ಯದ ಮೀನುಗಾರಿಕ ಸಚಿವರೊಂದಿಗೆ ಚರ್ಚಿಸಿದ್ದೇನೆ. ನ.19 ರಿಂದ ಕ್ಯಾಬಿನೆಟ್ ಸಭೆಯಲ್ಲಿ ಕಾರವಾರ ಉಸ್ತುವಾರಿ ಸಚಿವರು ಮೀನುಗಾರಿಕಾ ಸಚಿವರು ಹಾಗೂ ನಾನು ಚರ್ಚೆ ನಡೆಸಿ ಗೋವಾ ಸರ್ಕಾರದ ಜತೆ ಮಾತನಾಡಲು ನಿರ್ಧರಿಸಿದ್ದೇನೆ ಎಂದು ನಗರ ಮತ್ತು ವಸತಿ ಸಚಿವ ಯು,ಟಿ ಖಾದರ್ ಪತ್ರಿಕಾಗೋಷ್ಟಿಯಲ್ಲಿ ಹೇಳಿದರು.
ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ವ್ಯಾಪಾರ- ವಹಿವಾಟಿಗೆ ನಿರ್ಬಂಧ ಸರಿಯಲ್ಲ. ಸಮಸ್ಯೆ ಇದ್ದರೆ ರಾಜ್ಯದ ಮೀನುಗಾರಿಕೆ ಇಲಾಖೆಗೆ ತಿಳಿಸಬಹುದಿತ್ತು.ಆದರೆ ಏಕಾಏಕಿ ನಿರ್ಬಂಧ ಸರಿಯಲ್ಲ ಎಂದರು.
ಈ ನಡುವೆ ಪಣಜಿಯಲ್ಲಿ ಮಾತನಾಡಿದ ಗೋವಾ ಸರ್ಕಾರದ ಆರೋಗ್ಯ ಸಚಿವ ವಿಶ್ವಜಿತ್ ರಾಣೆ ಅನ್ಯ ರಾಜ್ಯಗಳಿಂದ ಗೋವಾಕ್ಕೆ ಮೀನು ಅಮದು ನಿಷೇಧ ಮುಂದುವರಿಯಲಿದೆಯಾವುದೇ ಬೆದರಿಕೆಗೆ ಜಗ್ಗುವುದಿಲ್ಲ ಎಂದು ಸ್ಪಷ್ಟಪಡಿಸಿದ್ದಾರೆ.