ಮುಂಬೈ, ನ 18 (MSP): ಬಾಲಿವುಡ್ ತಾರಾಜೋಡಿ, ಕ್ಯೂಟ್ ಜೋಡಿ ಎಂದೇ ಖ್ಯಾತಿ ಪಡೆದ ರಣ್ವೀರ್ ಸಿಂಗ್ ಮತ್ತು ದೀಪಿಕಾ ಪಡುಕೋಣೆ ಈಗ ಮಿಸ್ಟರ್ ಆಂಡ್ ಮಿಸೆಸ್ ಆಗಿದ್ದು ನವ ವಧುವರರು ಮುಂಬೈಗೆ ಏರ್ಪೋರ್ಟ್ಗೆ ಬಂದಿಳಿದಿದ್ದಾರೆ. ಈ ಬಾಲಿವುಡ್ ಜೋಡಿ ನವೆಂಬರ್ 14 ಮತ್ತು 15ರಂದು ಕೊಂಕಣಿ ಹಾಗೂ ಸಿಂಧಿ ಶೈಲಿಯಲ್ಲಿ ಇಟೆಲಿಯ ಸುಂದರ ಲೇಕ್ ಕೋಮೋದ ವಿಲ್ಲಾ ಡೆಲ್ ಬಲ್ಬಿಯನೆಲ್ಲೋದಲ್ಲಿ ಎರಡೆರಡು ಬಾರಿ ಹಸೆಮಣೆ ಏರಿದರು.
ರಾಮ್ಲೀಲಾ ಜೋಡಿ ರಣ್ ವೀರ್ ಸಿಂಗ್ ಹಾಗೂ ದೀಪಿಕಾ ಪಡುಕೋಣೆ ದಂಪತಿಯನ್ನ ಸ್ವಾಗತಿಸೋಕೆ ಮುಂಬೈನಲ್ಲಿ ರಣ್ವೀರ್ ಸಿಂಗ್ ಕುಟುಂಬಸ್ಥರು, ಸಂಬಂಧಿಕರು, ಸ್ನೇಹಿತರು ಹಾಗೂ ಅಭಿಮಾನಿಗಳು ಸಜ್ಜಾಗಿದೆ. ಇಡೀ ಮನೆಯನ್ನ ವಿದ್ಯುತ್ ದೀಪ ಹಾಗೂ ಹೂವುಗಳಿಂದ ಶೃಂಗರಿಸಲಾಗಿದೆ. ನವದಂಪತಿಗಳು ಸಾಂಪ್ರದಾಯಿಕ ಉಡುಗೆಗಳಲ್ಲಿ ಕಂಗೊಳಿಸುತ್ತಿದ್ದಾರೆ. ದೀಪ್ -ವೀರ್ ನನ್ನು ನೋಡಲು ಹಾತೊರೆಯುತ್ತಿದ್ದ ಅಭಿಮಾನಿಗಳು ಫುಲ್ ಖುಷಿಯಾಗಿದ್ದಾರೆ.