ಬೆಳ್ತಂಗಡಿ, ನ 18 (MSP): ವಿಷ ಸೇವಿಸಿ ಆತ್ಮಹತ್ಯೆಗೆ ಯತ್ನಿಸಿ ಆಸ್ಪತ್ರೆಗೆ ದಾಖಲಾಗಿದ್ದ ಪುಂಜಾಲಕಟ್ಟೆ ಕಾಲೇಜಿನ ವಿದ್ಯಾರ್ಥಿನಿ ಚಿಕಿತ್ಸೆ ಫಲಕಾರಿಯಾಗದೆ ಮಂಗಳೂರು ಆಸ್ಪತ್ರೆಯಲ್ಲಿ ಮೃತಪಟ್ಟ ಘಟನೆ ನಡೆದಿದೆ. ಮೃತ ಯುವತಿಯನ್ನು ಬೆಳ್ತಂಗಡಿಯ ಹುನ್ಸೇಕಟ್ಟೆ ನಿವಾಸಿ ಕೇಶವ ಪೂಜಾರಿ ಹಾಗೂ ಕಲ್ಯಾಣಿಯವರ ಪುತ್ರಿ ಕಾವ್ಯಶ್ರೀ (18) ಎಂದು ಗುರುತಿಸಲಾಗಿದೆ. ಕಾವ್ಯಶ್ರೀ ಪುಂಜಾಲಕಟ್ಟೆ ಕಾಲೇಜಿನಲ್ಲಿ ದ್ವೀತಿಯ ಬಿ.ಕಾಂ. ಅಭ್ಯಾಸಿಸುತ್ತಿದ್ದರು. ಇವರು ಕಳೆದ ಸೋಮವಾರ ವಿಷಸೇವನೆ ಮಾಡಿ ಆತ್ಮಹತ್ಯೆಗೆ ಯತ್ನಿಸಿದ್ದರು.
ಸ್ಥಳಿಯ ನಿವಾಸಿ ಆಟೋ ಚಾಲಕ ಬೆಂಕಿ ಬಾಬು ಗೌಡ ಯುವತಿಗೆ ಮಾನಸಿಕ ಕಿರುಕುಳದಿಂದ ಬೇಸತ್ತ ಯುವತಿ, ಇಲಿಪಾಷಣ ಸೇವಿಸಿ ಆತ್ಮಹತ್ಯೆಗೆ ಯತ್ನಿಸಿದ್ದರು ಎಂದು ಆರೋಪಿಸಲಾಗಿತ್ತು. ತಕ್ಷಣವೇ ಆಕೆಯನ್ನು ಆಸ್ಪತ್ರೆಗೆ ದಾಖಲಿಸಲಾಗಿತ್ತು. ಇದೇ ವಿಚಾರವಾಗಿ ಕೆಲ ದಿನಗಳ ಹಿಂದೆ ದಿನದ ಹಿಂದೆ ಬಾಬು ಗೌಡ ಹಾಗೂ ಸಾರ್ವಜನಿಕರ ನಡುವೆ ಯುವತಿ ವಿಚಾರದಲ್ಲಿ ಗಲಾಟೆ ಕೂಡ ನಡೆದಿತ್ತು ಎನ್ನಲಾಗಿದೆ.
ಬೆಳ್ತಂಗಡಿ ಠಾಣಾ ವ್ಯಾಪ್ತಿಯಲ್ಲಿ ಈ ಪ್ರಕರಣ ನಡೆದಿದೆ.