ಹುಬ್ಬಳ್ಳಿ, ನ 18 (MSP): ಪಕ್ಷ ನಿರ್ಧರಿಸಿದರೆ ಮುಖ್ಯಮಂತ್ರಿಯಾಗಲು ನಾನು ಸಿದ್ದ ಎನ್ನುವ ಡಿಸಿಎಂ ಡಾ ಜಿ.ಪರಮೇಶ್ವರ್ ಅವರ ಹೇಳಿಕೆಗೆ ಮಾಜಿ ಸಿಎಂ ಸಿದ್ದರಾಮಯ್ಯ ಅವರು ಪ್ರತಿಕ್ರಿಯೆ ನೀಡಿದ್ದು, ಕಾಂಗ್ರೆಸ್ನಲ್ಲಿ ಮುಖ್ಯಮಂತ್ರಿ ಆಗುವ ಅರ್ಹತೆ ಮತ್ತು ಆಕಾಂಕ್ಷೆ ಹಲವು ನಾಯಕರಿಗೆ ಇದೆ ಎಂದಿದ್ದಾರೆ. ಇದರಲ್ಲಿ ಡಾ ಜಿ.ಪರಮೇಶ್ವರ್ ಅವರು ಕೂಡಾ ಒಬ್ಬರು, ಅವರು ಹೇಳಿರುವುದರಲ್ಲಿ ತಪ್ಪೇನಿಲ್ಲ. ಆದರೆ ಸದ್ಯಕ್ಕೆ ಸಿಎಂ ಬದಲಾವಣೆ ವಿಚಾರ ಇಲ್ಲ, ಯಾಕೆಂದರೆ ಆ ಸೀಟು ಖಾಲಿ ಇಲ್ಲ ಅಂತಾ ಹೇಳಿದರು.
ಭಾನುವಾರ ಹುಬ್ಬಳ್ಳಿ ವಿಮಾನ ನಿಲ್ದಾಣದಲ್ಲಿ ಮಾಧ್ಯಮದೊಂದಿಗೆ ಮಾತನಾಡಿದ ಸಿದ್ದರಾಮಯ್ಯ ಅವರು ಈಗ ಸಮ್ಮಿಶ್ರ ಸರ್ಕಾರದ ಆಡಳಿತವಿದೆ ನಮಗೆ ಬಹುಮತ ಇಲ್ಲ. ಅವರು ನೀಡಿದ ಹೇಳಿಕೆಯಲ್ಲಿ ತಪ್ಪಿಲ್ಲ, ಕಾಂಗ್ರೆಸ್ನಲ್ಲಿ ಸಾಕಷ್ಟು ಹಿರಿಯರು ಮತ್ತು ಕಿರಿಯರು ಮುಖ್ಯಮಂತ್ರಿ ಆಗುವ ಕನಸು ಇಟ್ಟುಕೊಂಡಿದ್ದಾರೆ ಎಂದರು.
ಇದೇ ಸಂದರ್ಭ ಸಚಿವ ಸಂಪುಟ ವಿಸ್ತರಣೆ ಶೀಘ್ರದಲ್ಲೆ ನಡೆಯಲಿದೆ. ಐದು ರಾಜ್ಯಗಳ ಚುನಾವಣೆ ನಡೆಯುತ್ತಿರುವುದರಿಂದ ರಾಹುಲ್ ಗಾಂಧಿ ಭೇಟಿಯಾಗಲು ಸಾಧ್ಯವಾಗುತ್ತಿಲ್ಲ ರಾಹುಲ್ ಗಾಂಧಿಗೆ ಭೇಟಿಗೆ ಸಮಯ ಸಿಕ್ಕ ಬಳಿಕ ಸಂಪುಟ ವಿಸ್ತರಣೆ ಬಗ್ಗೆ ಯಾವಾಗ ಎಂದು ತಿಳಿಯಲಿದೆ ಎಂದರು.