ಬೆಂಗಳೂರು ನ 18 (MSP):ಸಮ್ಮಿಶ್ರ ಸರ್ಕಾರದ ಉಪಮುಖ್ಯಮಂತ್ರಿ, ಗೃಹ ಸಚಿವ, ಹಾಗೂ ಬೆಂಗಳೂರು ನಗರಾಭಿವೃದ್ಧಿ ಸಚಿವ ಡಾ.ಜಿ.ಪರಮೇಶ್ವರ್ ಅವರ ಇದ್ದೊಬ್ಬ ಮಗ, 2018ರ ಆರಂಭದಲ್ಲಿ ವಿದೇಶದಲ್ಲಿದ್ದು ಲಿಂಗ ಪರಿವರ್ತನೆ ಮಾಡಿಸಿಕೊಂಡಿದ್ದು, ಹೆಣ್ಣಾಗಿ ಪರಿವರ್ತನೆ ಮಾಡಿಕೊಂಡಿದ್ದು ಸುದ್ದಿಯಾಗಿತ್ತು. ಆದರೆ ಇದೀಗ ಪರಮೇಶ್ವರ್ ಅವರ ‘ಮಗ’ಳು ಬೆಂಗಳೂರಿಗೆ ಹಿಂತಿರುಗಿದ್ದಾರೆ. ಎಲ್ಲವೂ ಭಗವಂತನ ಲೀಲೆ ಎಂದು ಪರಮೇಶ್ವರ್ ಹಾಗೂ ಅವರ ಪತ್ನಿ ಬಂದಿದ್ದನ್ನು ಎದುರಿಸೋಣ ಎಂದು ಕೊಂಡು ಸುಮ್ಮನಾಗಿದ್ರೆ, ಇದೀಗ ಮಗಳಾದ ಮಗನ, ಹೈ ಲೆವೆಲ್ ಲೈಫ್ ಸ್ಟೈಲ್, ಪಾರ್ಟೀಸ್ , ಬೈಕ್ ರೈಡಿಂಗ್, ಕಾರ್ ರೈಡಿಂಗ್ ಇವುಗಳನ್ನೆಲ್ಲಾ ಕಂಡು ಪರಮೇಶ್ವರ್ ದಂಪತಿಗೆ ಇರಿಸು ಮುರಿಸಾಗುತ್ತಿದೆ ಎನ್ನುವ ಸುದ್ದಿಯೊಂದು ಹರಿದಾಡುತ್ತಿದೆ.
ಪರಮೇಶ್ವರ್ ಮತ್ತು ಕನ್ನಿಕಾ ಪರಮೇಶ್ವರಿ ದಂಪತಿಗೆ ಇದ್ದಿದ್ದು ಒಬ್ಬನೇ ಮಗ. ಹೆಸರು ಶಶಾಂಕ್ ಪರಮೇಶ್ವರ್, ಹೆಚ್ಚಾಗಿ ವಿದ್ಯಾಭ್ಯಾಸ, ತರಬೇತಿ ಎಂದು ವಿದೇಶದಲ್ಲೇ ಬೆಳೆದಿದ್ದರು. ಪೈಲಟ್ ಟ್ರೈನಿಂಗ್ಗೆ ನ್ಯೂಜಿಲೆಂಡ್ಗೆ ಹೋದ ಶಶಾಂಕ್ ತಂದೆಯ ಒಪ್ಪಿಗೆ ಪಡೆದು ಶಾನ್ ಪರಮೇಶ್ವರ್ ಎಂದು ಹೆಸರು ಬದಲಾಯಿಸಿಕೊಂಡಿದ್ದರು. ಆದರೆ ಇದಾದ ಬಳಿಕ 2018 ರಲ್ಲಿ ಶಾನ್ ಪರಮೇಶ್ವರ್, ವಿದೇಶದಲ್ಲೇ ಇದ್ದು ಲಿಂಗ ಪರಿವರ್ತನೆ ಮಾಡಿಕೊಂಡಿದ್ದರು. ಬಳಿಕ ತಮ್ಮ ಹೆಸರನ್ನು ಶನಾ ಎಂದು ಬದಲಾಯಿಸಿಕೊಂಡಿದ್ದರು. ಇದೆಲ್ಲದರ ಬಗ್ಗೆ ಮನನೊಂದು ಪರಂ ಅವರು ಮಗ ಇಷ್ಟ ಬಂದ ಹಾಗೇ ಇರಲಿ ಅಂತ ಹಾರೈಸಿ ಸುಮ್ಮನಾಗಿದ್ದರು.
ಇನ್ನು ಪರಮೇಶ್ವರ್ ಮಗನ ಬಗ್ಗೆ ಅವರ ಆಪ್ತ ವಲಯದವರಿಗೂ ಹೆಚ್ಚಿನ ಮಾಹಿತಿ ಇಲ್ಲ. ಪರಮೇಶ್ವರ್ ಅವರ ಮಗ ಲಿಂಗ ಪರಿವರ್ತನೆ ಮಾಡಿಸಿಕೊಂಡಿದ್ದಾರೆ ಎಂಬ ಸುದ್ದಿಯೂ ಅವರ ಆಪ್ತ ವಲಯದ ಅನೇಕರಿಗೆ ತಿಳಿದಿಲ್ಲ. ಅವರ ಮಗ ವಿದೇಶದಲ್ಲಿ ಇದ್ದಿದ್ದೇ ಹೆಚ್ಚು. ಈಗಲೂ ವಿದೇಶದಲ್ಲಿದ್ದಾನೆ, ಸ್ಫೋರ್ಟ್ಸ್ ಕ್ಲಬ್ ನಡೆಸುತ್ತಾನೆ ಎಂಬುವುದು ಮಾತ್ರ ಬಹುತೇಕರಿಗೆ ತಿಳಿದಿರುವ ಸಂಗತಿ. ಅವರ ಲಿಂಗ ಪರಿವರ್ತನೆ ವಿಷಯ ಅನೇಕರಿಗೆ ಗೊತ್ತಿಲ್ಲ.
ಆದರೆ ಶಾನ್ ಆಗಿದ್ದ ತಾನು ಶನಾ ಆಗಿ ಲಿಂಗ ಪರಿವರ್ತನೆ ಮಾಡಿಸಿಕೊಂಡಿರುವುದಾಗಿ ಸಾಮಾಜಿಕ ಜಾಲತಾಣದ ಮೂಲಕ ಈ ಹಿಂದೆಯೇ ಬಹಿರಂಗ ಪಡಿಸಿದ್ದರು ಅಲ್ಲದೆ ತಮ್ಮ ಲಿಂಗತ್ವದ ಆಯ್ಕೆಯನ್ನು ಅವರು ಸಮರ್ಥಿಸಿಕೊಂಡಿದ್ದರು.
ಆದರೆ ಇದೀಗ ಶನಾ ಬೆಂಗಳೂರಿಗೇ ವಾಪಸ್ ಆಗಿದ್ದು ಪರಮೇಶ್ವರ್ ಅವರ ನಿವಾಸದಲ್ಲಿಯೇ ವಾಸವಾಗಿದ್ದಾರೆ. ಪಕ್ಷದ ನಾಯಕರು, ಹಿಂಬಾಲಕರು, ಅಭಿಮಾನಿಗಳು, ಅವರ ಕ್ಷೇತ್ರದ ಜನರಿಂದ ಸದಾ ತುಂಬಿತುಳುಕುತ್ತಿರುವ ಪರಂ ಅವರ ಮನೆಯಲ್ಲಿ ಶನಾ ಅವರ ಹೈ ಲೆವೆಲ್ ಲೈಫ್ ಸ್ಟೈಲ್, ಪಾರ್ಟೀಸ್ ಕಂಡು ಪರಮೇಶ್ವರ್ ಅವರ ದಂಪತಿಗೆ ಮುಜುಗರವಾಗುತ್ತಿದೆ ಎನ್ನಲಾಗಿದೆ.