ಹೆಬ್ರಿ, ನ 19(MSP): ಉಡುಪಿ ಜಿಲ್ಲೆಯ ಹೆಬ್ರಿ ಮುದ್ರಾಡಿ ಬರ್ಸ ಬೆಟ್ಟುವಿನ ಗಂಗಾಧರ ಶೆಟ್ಟಿಯವರ ಮನೆಯ ಹಾಲಿನ ಮಣ್ಣಿನ ಅಡಿಯಲ್ಲಿ ಆರು ಅಡಿ ಆಳದಲ್ಲಿ ನಾಗ ದೇವರ ಜೈನರ ಕಾಲದ ಮೂರ್ತಿ ಪತ್ತೆಯಾಗಿದೆ.
ಮುಂಬಯಿ ಉದ್ಯಮಿಯಾಗಿರುವ ಓಂಸಾಯಿ ಮೋಟಾರ್ಸ್ ಮಾಲಾಕರಾಗಿರುವ ಗಂಗಾಧರ್ ಶೆಟ್ಟಿಯವರು ಮುದ್ರಾಡಿಯಲ್ಲಿ ಒಂದು ಭವ್ಯವಾದ ಬಂಗಲೆಯ ಮನೆಯನ್ನು ಕಟ್ಟಿದ್ದರು.ಮನೆಯನ್ನು ನಿರ್ಮಿಸಿದ ಬಳಿಕ ಗಂಗಾಧರ ಶೆಟ್ಟಿಯವರಿಗೆ ಮತ್ತು ಕುಟುಂಬದವರಿಗೆ ಆ ಮನೆಯಲ್ಲಿ ನೆಮ್ಮದಿ ಇರಲಿಲ್ಲ.ಮುಂಬಯಿಯಲ್ಲಿ ತಮ್ಮ ವ್ಯಾಪಾರವೆಲ್ಲಾ ನಷ್ಟವನ್ನು ಅನುಭವಿಸಿತು.ತುಂಬಾ ನೊಂದಿದ್ದ ಗಂಗಾಧರ ಶೆಟ್ಟಿಯವರು ತಮ್ಮ ನೋವನ್ನು ಸ್ನೇಹಿತರ ಬಳಿ ಹೇಳಿಕೊಂಡಿದ್ದಾರೆ. ನಂತರ ಸ್ನೇಹಿತರ ಸೂಚನೆಯಂತೆ ಧಾರ್ಮಿಕ ಚಿಂತಕ ತೀರ್ಥಹಳ್ಳಿಯ ಆರಗ ಅಗ್ರಹಾರ ನಾಗರಾಜ್ ಭಟ್ಟರಲ್ಲಿ ಹೋದರು.ನಾಗರಾಜ್ ಭಟ್ ಪ್ರಶ್ನೆ ಹಾಕಿ ನೋಡುವಾಗ : ಮನೆಯ ಹಾಲಿನ ಒಳಗ ನಾಗ ದೇವರ ಕಲ್ಲು ಇದೆ’ ಅದರ ಮೇಲೆ ಮನೆ ಕಟ್ಟಿದ್ದಿರಿ’ಅದೇ ಈ ತೊಂದರೆಗೆಲ್ಲಾ ಕಾರಣ,ಅದನ್ನು ಮೇಲೆ ತೆಗೆದು,ಆ ಮೂರ್ತಿಗೆ ಪೂಜೆಯನ್ನು ಮಾಡಬೇಕು ಎಂದು ಹೇಳಿದರು.
ನಾಗರಾಜ್ ಭಟ್ ಮನೆಯ ಒಳಗೆ ಬಂದು ಹಾಲಿನಲ್ಲಿ ಸ್ಥಳ ತೋರಿಸಿ ಅಗೆಯಲು ಹೇಳಿದರು. ಆಗ ಅದೇ ಸ್ಥಳದಲ್ಲಿ ಅಗೆಯುವಾಗ ಆರು ಅಡಿಯಲ್ಲಿ ಪುರಾತನ ಜೈನರ ಕಾಲದ ನಾಗದೇವರ ಕಲ್ಲು ದೊರಕಿದೆ.ಮನೆಯವರಿಗೆ ಮತ್ತು ಅಲ್ಲಿ ನೆರದಿದ್ದ ಜನರಿಗೆ ಆಶ್ಚರ್ಯಕರವಾಗಿದೆ.ನಾಗರಾಜ್ ಭಟ್ಟರ ಪ್ರಕಾರ: ‘ಹಿಂದೆ ಆ ಪರಿಸರದಲ್ಲಿ ಜೈನರ ಆಳ್ವಿಕೆ ಇತ್ತು.ಅಲ್ಲಿ ಕೆಲವು ದೇವಾಲಯಗಳಿದ್ದವು, ಅವುಗಳು ನಾಶವಾಗಿದೆ,ಆ ಪರಿಸರದಲ್ಲಿ ಕೆಲವರು ಅದರ ಮೇಲೆಯೇ ಮನೆ ಕಟ್ಟಿದ್ದಾರೆ”ಎಂದು ಹೇಳಿದರು.
ಒಟ್ಟಾರೆ ಮನೆಯ ಹಾಲಿನ ಒಳಗೆ ಜೈನರ ಹಳೆಯ ಕಾಲದ ಮೂರ್ತಿ ದೊರಕಿದ್ದು ಮಾತ್ರ ಆಶ್ಚರ್ಯ ಮತ್ತು ವಿಶೇಷವಾಗಿದೆ.