ಬೆಂಗಳೂರು, ನ 19(MSP): ಕಬ್ಬು ಬಾಕಿ ಪಾವತಿ , ಸಾಲಮನ್ನಾ ಹಾಗೂ ಕಬ್ಬಿಗೆ ಸೂಕ್ತ ಬೆಂಬಲ ಬೆಲೆ ಘೋಷಿಸಬೇಕು ಎಂದು ಆಗ್ರಹಿಸಿ ಹೋರಾಟಕ್ಕೆ ಇಳಿದಿದ್ದ ವಿವಿಧ ಜಿಲ್ಲೆಗಳಿಂದ ರೈತರು ಬೆಂಗಳೂರಿನ ಶಕ್ತಿ ಸೌಧ ಬಳಿ ಬಂದಿಳಿದಿದ್ದು, ಪ್ರತಿಭಟನೆಯ ಕಾವು ತೀವ್ರ ಸ್ವರೂಪ ಪಡೆದುಕೊಳ್ಳುತ್ತಿದೆ.
ಸರ್ಕಾರ ರೈತರ ಸಾಲ ಮನ್ನಾದ ಗೊಂದಲ ನಿವಾರಿಸಬೇಕು, ಕಬ್ಬಿಗೆ ಬೆಂಬಲ ಬೆಲೆ ನಿಗದಿ ಮಾಡಬೇಕು ಎಂದು ಆಗ್ರಹಿಸಿ ರೈತರು ಸೋಮವಾರ ಬೆಳ್ಳಂಬೆಳಗ್ಗೆ ಬೆಂಗಳೂರಿಗೆ ತಲುಪಿದ್ದಾರೆ. ರೈತರನ್ನು ವಿಧಾನ ಸೌಧದ ಬಳಿ ತೆರಳದಂತೆ ಪೊಲೀಸರು ತಡೆದಿದ್ದು, ಸ್ವತಂತ್ಯ ಉದ್ಯಾನವನದಲ್ಲಿ ರೈತರು ಸೇರಿದ್ದಾರೆ.
ರೈತರನ್ನು ಗೂಂಡಾ ಎಂದ ಕರೆದ ಮುಖ್ಯಮಂತ್ರಿಗಳಿಗೆ ಧಿಕ್ಕಾರ, ರೈತರು ಬೇಡವಾಗಿರುವ ಕೇಂದ್ರ ಸರ್ಕಾರಕ್ಕೆ ಧಿಕ್ಕಾರ, ಸಾಲಮನ್ನಾ ಮಾಡದ ರಾಜ್ಯ ಸರ್ಕಾರಕ್ಕೆ ಧಿಕ್ಕಾರ” ಎಂದು ಕೂಗಿ ತಮ್ಮ ಆಕ್ರೋಶ ವ್ಯಕ್ತಪಡಿಸಿದ್ದಾರೆ. ವಿಧಾನಸೌಧ ಸುತ್ತಮುತ್ತ ಭಾರಿ ಬಂದೋಬಸ್ತ್ ಮಾಡಲಾಗಿದ್ದು, ಸಾವಿರಕ್ಕೂ ಹೆಚ್ಚು ಪೊಲೀಸರನ್ನ ನಿಯೋಜಿಸಲಾಗಿದೆ.