ಮುಂಬೈ, ನ 19(MSP): ಬಾಲಿವುಡ್ ನಟಿ ನೇಹಾ ಧುಪಿಯಾ ಭಾನುವಾರದಂದು ಮುಂಜಾನೆ ತಮ್ಮ ಮೊದಲನೇ ಮಗುವಿಗೆ ಜನ್ಮ ನೀಡಿದ್ದಾರೆ.
ನೇಹಾ ಧುಪಿಯಾ ತನ್ನ ಬಹುಕಾಲದ ಗೆಳೆಯ ನಟ ಅಂಗದ್ ಬೇಡಿ ಜೊತೆ ಮೇ 10 ರಂದು ಸದ್ದಿಲ್ಲದೆ ತೀರಾ ಖಾಸಗಿಯಾಗಿ ನವದೆಹಲಿಯ ಗುರುದ್ವಾರದಲ್ಲಿ ಮದುವೆ ಆಗಿ ತಮ್ಮ ಅಭಿಮಾನಿಗಳಿಗೆ ಶಾಕ್ ನೀಡಿದ್ದರು . ಮದುವೆಯಾಗಿ ಕೆಲವೇ ತಿಂಗಳಲ್ಲಿ ಅಂದರೆ ಆ. 24 ರಂದು ತಾವು ಹೊಸ ಅತಿಥಿಯ ನಿರೀಕ್ಷೆಯಲ್ಲಿ ಇರುವುದಾಗಿ ತಿಳಿಸಿದ್ದ ಅಂಗದ್ ತಮ್ಮ ಪತ್ನಿ ನೇಹಾ ಗರ್ಭಿಣಿ ಎಂದು ಸಾಮಾಜಿಕ ಜಾಲತಾಣದಲ್ಲಿ ಪೋಸ್ಟ್ ಮಾಡಿದ್ದರು.
ಇದೀಗಾ ನೇಹಾ ಹಾಗೂ ಅಂಗದ್ ಇವರಿಬ್ಬರ ಗೆಳತಿಯಾದ ಸೋಫಿ ಚೌಧರಿ ಅವರು, ನೇಹಾ ಅವರಿಗೆ ಹೆಣ್ಣು ಮಗು ಜನಿಸಿದೆ ಎಂದು ಮೊದಲು ಶುಭಾಶಯ ತಿಳಿಸಿ ಟ್ವೀಟ್ ಮಾಡಿದ್ದರು.
ವಿವಾಹಕ್ಕೆ ಮುನ್ನವೇ ಧೂಫಿಯಾ ಗರ್ಭ ಧರಿಸಿದ್ದ ಕಾರಣಕ್ಕೆ ಅಂಗದ್ ನೇಹಾ ತರಾತುರಿಯಲ್ಲಿ ವಿವಾಹವಾಗಿದ್ದರು. ಇವರಿಬ್ಬರ ವಿವಾಹ ತುಂಬಾ ಸರಳವಾಗಿ ಪೋಷಕರು ಮತ್ತು ಆಪ್ತ ಬಂಧುಗಳು ಸಮ್ಮುಖದಲ್ಲಿ ಮದುವೆ ನಡೆದಿತ್ತು.