ಉಳ್ಳಾಲ, ನ 19(SM): ದೇರಳಕಟ್ಟೆಯ ಕಾನಕೆರೆಯ ಬಾವಿಗಳಲ್ಲಿ ಪೆಟ್ರೋಲ್ ಪತ್ತೆ ಹಿನ್ನೆಲೆ ದೇರಳಕಟ್ಟೆಯ ಪೆಟ್ರೋಲ್ ಪಂಪ್ ನ ಟ್ಯಾಂಕ್ ಬದಲಾವಣೆಗೆ ಐಓಸಿಎಲ್ ಅಧಿಕಾರಿಗಳು ನಿರ್ಧರಿಸಿದ್ದಾರೆ.
ಸೋಮವಾರದಂದು ಸ್ಥಳಕ್ಕೆ ಪರಿಸರ ಮಾಲಿನ್ಯ ನಿಯಂತ್ರಣ ಮಂಡಳಿ ಅಧಿಕಾರಿ ಜಯಪ್ರಕಾಶ ನಾಯಕ್ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಈ ಸಂದರ್ಭದಲ್ಲಿ ಪೆಟ್ರೋಲ್ ಬಂಕ್ ನ ಟ್ಯಾಂಕ್ಗಳ ಪ್ರೆಷರ್ ಪರಿಶೀಲನೆ ಮಾಡಲಾಯಿತು. ಆಗ ಯಾವುದೇ ವ್ಯತ್ಯಾಸಗಳು ಕಂಡು ಬಂದಿಲ್ಲ. ಆದರೆ, ಬಾವಿಯ ನೀರಿನಲ್ಲಿ ಬದಲಾವಣೆ ಕಂಡು ಬಂದಿದೆ.
ಈ ಹಿನ್ನೆಲೆ ಐಓಸಿಎಲ್ನವರು ಮಂಗಳವಾರದಂದೇ ಟ್ಯಾಂಕನ್ನು ಬದಲಾಯಿಸುವ ನಿರ್ಧಾರ ಕೈಗೊಂಡಿದ್ದಾರೆ ಎಂದು ಅಧಿಕಾರಿ ತಿಳಿಸಿದ್ದಾರೆ. ಟ್ಯಾಂಕ್ ಬದಲಾವಣೆ ಬಳಿಕವೇ ಸೋರಿಕೆ ಆಗಿದೆಯೋ? ಅಥವಾ ಇಲ್ಲವೋ ಅನ್ನುವುದು ತಿಳಿದುಬರಲಿದೆ.