ಮಂಗಳೂರು, ನ20(SS): ಸತ್ಯ ಸಮಾಚರ್ ವಾಮಂಜೂರು ಮತ್ತು ಬ್ಲಡ್ ಹೆಲ್ಪ್ ಲೈನ್ ಮಂಗಳೂರು ಇದರ ವತಿಯಿಂದ ವಾಮಂಜೂರಿನ ಅಭಿವೃದ್ಧಿ ಫೌಂಡೇಶನ್ ಮತ್ತು ಸರಿಪಳ್ಳದಲ್ಲಿರುವ ರಿಯ ಫೌಂಡೇಶನ್ ನ ವಿಭಿನ್ನ ಸಾಮರ್ಥ್ಯದವರೊಂದಿಗೆ ಮಹಮ್ಮದ್ ಪೈಗಂಬರರ ಜನ್ಮ ದಿನಾಚರಣೆಯನ್ನು ವಿಭಿನ್ನವಾಗಿ ಆಚರಿಸಲಾಯಿತು.
ಕಾರ್ಯಕ್ರಮವನ್ನು ಅಬೂಬಕ್ಕರ್ ವಾಮಂಜೂರು ಉದ್ಘಾಟಿಸಿ ಬಳಿಕ, ಪ್ರವಾದಿ ಮೊಹಮ್ಮದ್ ಅವರ ಜೀವನ ಚರಿತ್ರೆ ಬಗ್ಗೆ ಮಾಹಿತಿ ನೀಡಿದರು.
ಇದೇ ವೇಳೆ ಬ್ಲಡ್ ಹೆಲ್ಪ್ ಲೈನ್ ಗ್ರೂಪ್ ಅಡ್ಮಿನ್ ಡಾ. ಸಿದ್ದೀಕ್ ಅಡ್ಡೂರ್ ಅಂಗವೈಕಲ್ಯತೆ ಅನ್ನುವುದು ರೋಗವಲ್ಲ. ಅದನ್ನು ನಾವು ಚಾಲೆಂಜ್ ಆಗಿ ತೆಗೆದುಕೊಳ್ಳಬೇಕು. ಆಗ ಮಾತ್ರ ದೇಹದ ಯಾವುದೇ ಭಾಗದಲ್ಲಿ ವೈಕಲ್ಯವಿದ್ದರೂ ಸಾಮಾನ್ಯರಂತೆ ಸಮಾಜದಲ್ಲಿ ಮೇಲೆ ಬರಬಹುದು ಎಂದು ಹೇಳಿದರು.
ವೆಲ್ಪೇರ್ ಫಾರ್ಟಿ ಆಫ್ ಇಂಡಿಯಾ ಇದರ ಜಿಲ್ಲಾಧ್ಯಕ್ಷ ಕಮರುದ್ದೀನ್ ಮಾತನಾಡಿ, ಪೈಗಂಬರ್ ಅವರ ಬದುಕಿನ ಮತ್ತು ಯಾವ ರೀತಿ ಪೈಗಂಬರ್ ತಮ್ಮ ಜೀವನವನ್ನು ಇಸ್ಲಾಂಗಾಗಿ ಮುಡಿಪಾಗಿಟ್ಟಿದ್ದಾರೆ ಎಂಬುದರ ಕುರಿತು ತಿಳಿಸಿದರು.
ಕಾರ್ಯಕ್ರಮದಲ್ಲಿ ಸತ್ಯಸಮಾಚರ್ ಗ್ರೂಪ್ ಮುಖ್ಯಸ್ಥರಾದ ಅಡ್ವಕೇಟ್ ಇಲ್ಯಾಸ್ ವಾಮಂಜೂರು, ಬ್ಲಡ್ ಹೆಲ್ಪ್ ಲೈನ್ ಕರ್ನಾಟಕ ಸಲಹೆಗಾರ ಮುಸ್ತಫಾ ಅಡ್ಡೂರ್ ದೆಮ್ಮಲೆ, ಅಭಿವೃದ್ಧಿ ಫೌಂಡೇಶನ್ ಮುಖ್ಯಸ್ಥೆ ಭಾಗ್ಯ, ಇಮ್ರಾನ್ ಅಡ್ಡೂರ್, ಫಾರೂಕ್ ವಾಮಂಜೂರು ಮತ್ತಿತರರು ಉಪಸ್ಥಿತರಿದ್ದರು