ಬೆಂಗಳೂರು, ನ 20(MSP): ವಾಟ್ಸಪ್ನಂತಹ ಮಲ್ಟಿಮೀಡಿಯಾ ಮೆಸೇಜಿಂಗ್ ಆ್ಯಪ್ ಅಂತು ಈಗ ಎಲ್ಲರ ಪ್ರಮುಖ ಸಂವಹನ ಸೇತುಗಳಾಗಿದೆ. ವಿಶ್ವದಾದ್ಯಂತ 120 ಕೋಟಿ ಬಳಕೆದಾರರನ್ನು ಹೊಂದಿರುವ ದೈತ್ಯ ವಾಟ್ಸಪ್ ಮೆಸೇಜಿಂಗ್ ಅಪ್ಲಿಕೇಶನ್ 20 ಕೋಟಿ ಭಾರತೀಯ ಸಕ್ರಿಯ ಬಳಕೆದಾರರನ್ನು ಹೊಂದಿದೆ. ಹೀಗಾಗಿ ವಾಟ್ಸಪ್ ಸಂಸ್ಥೆಗೆ ಭಾರತದ ಜಾಗತಿಕ ಮಾರುಕಟ್ಟೆ ಬಹುಮುಖ್ಯವಾಗಿದೆ. ಇನ್ನು ಬಳಕೆದಾರರೂ ಕೂಡಾ ವಾಟ್ಸಪ್ ಇಲ್ಲದ ಮೊಬೈಲ್ ಪೋನ್ ಸಂಪೂರ್ಣವಲ್ಲ ಎನ್ನುವ ಮಟ್ಟಿಗೆ ತಲುಪಿದ್ದಾರೆ.
ಆದರೆ ವಾಟ್ಸಪ್ ಮೆಸೇಜಿಂಗ್ ಅಪ್ಲಿಕೇಶನ್ ಉಪಯೋಗ ಹಲವಿದ್ದರೆ ಕೆಲವೊಂದು ಮಂದಿ ಅದನ್ನು ದುರುಪಯೋಗ ಮಾಡುವುದು ಕೂಡಾ ಸಾಮಾನ್ಯ. ಹೀಗಾಗಿ ವಾಟ್ಸಪ್ ಸಂಸ್ಥೆ ತನ್ನ ಬಳಕೆದಾರರಿಗೆ ತನ್ನ 'ಷರತ್ತು ಮತ್ತು ನಿಬಂಧನೆ 'ಯಲ್ಲಿ ಹಲವು ರೀತಿಯ ಎಚ್ಚರಿಕೆಗಳನ್ನು ನೀಡಿದೆ. ಒಂದು ವೇಳೆ ಇದನ್ನು ಅರಿತು ವಾಟ್ಸಪ್ ಮೆಸೇಜಿಂಗ್ ಅಪ್ಲಿಕೇಶನ್ ನನ್ನು ದುರ್ಬಳಕೆ ಮಾಡಿಕೊಂಡರೆ ಅಂತಹ ಬಳಕೆದಾರರಿಕೆ ಜೀವನ ಪರ್ಯಂತ ವಾಟ್ಸಪ್ ಬಳಸದಂತೆ ನಿಷೇಧ ಹೇರುವ ಸಾಧ್ಯತೆ ಇದೆ.
ವಾಟ್ಸಪ್ ಸಂಸ್ಥೆಯ ಬಳಕೆದಾರನ ಮೇಲೆ ನಿಷೇಧ ಹೇರುವ ಕಾರಣಗಳು ಇದು..
* ವಾಟ್ಸಪ್ನಲ್ಲೂ ಬೇರೆಯವರ ಹೆಸರಿನಲ್ಲಿ ನಕಲಿ ಖಾತೆ ತೆರೆದರೆ, ನಿರ್ಬಂಧಕ್ಕೆ ಒಳಗಾಗೋದು ಪಕ್ಕ
* ವಾಟ್ಸಪ್ ನಲ್ಲಿ ಯಾವುದೇ ಕಾನೂನು ಬಾಹಿರ, ಅಶ್ಲೀಲಕಾರಿ, ಅವಹೇಳನಕಾರಿ, ಬೆದರಿಕೆ, ಪ್ರಚೋದನಾಕಾರಿ ಹಾಗೂ ದ್ವೇಷಪೂರಿತ ಮೇಸೇಜ್ ಗಳನ್ನು ರವಾನಿಸುವಂತಿಲ್ಲ.
* ವಾಟ್ಸಪ್ ಮೂಲಕ ಬಲ್ಕ್ ಮೆಸೇಜ್, ಆಟೋ-ಮೆಸೇಜಿಂಗ್, ಆಟೋ-ಡಯಲಿಂಗ್ ಮಾಡುವ ಯತ್ನ ನಡೆಸಿದರೆ ಬ್ಯಾನ್ ಮಾಡೋದು ಖಂಡಿತಾ
* ಬಹಳಷ್ಟು ಮಂದಿ ಒಬ್ಬ ಬಳಕೆದಾರರನ್ನು ಬ್ಲಾಕ್ ಮಾಡಿದ್ದಲ್ಲಿಯೂ ನಿಷೇಧ ಮಾಡುವ ಸಾಧ್ಯತೆ ಇದೆ.
* ಕೋಡಿಂಗ್ ಅಥವಾ ಪ್ರೋಗ್ರಾಮಿಂಗ್ ಮಾಡಿ ವಾಟ್ಸಪ್ ಕೋಡ್ನ್ನು ಬದಲಾಯಿಸಲು ನಿಷೇಧ ಗ್ಯಾರಂಟಿ.