ಕಾರವಾರ, ನ 20(SM): ಉತ್ತರಕನ್ನಡ ಜಿಲ್ಲೆಯ ಕುಮಟಾ ವಿಧಾನಸಭಾ ಕ್ಷೇತ್ರ ವ್ಯಾಪ್ತಿಯಲ್ಲಿ ಬಿಜೆಪಿ ಶಾಸಕರು, ಪ್ರಮುಖ ಕಾರ್ಯಕರ್ತರು ಇದ್ದಂತಹ ವಾಟ್ಸ್ಯಾಪ್ ಗ್ರೂಪ್ನಲ್ಲಿ ಅಸಭ್ಯವಾದ ವಿಡಿಯೋಗಳು ಹರಿದಾಡಿವೆ. ಈ ವಿಷಯ ಎಲ್ಲೆಡೆ ವೈರಲ್ ಆಗಿ ಇದೀಗ ಪಕ್ಷದ ಪ್ರಮುಖರು ಹಾಗೂ ಕಾರ್ಯಕರ್ತರನ್ನು ಮುಜುಗರಕ್ಕೀಡಾಗುವಂತೆ ಮಾಡಿದೆ.
ಕುಮಟಾ ವಿಧಾನಸಭಾ ಕ್ಷೇತ್ರ ವ್ಯಾಪ್ತಿಯಲ್ಲಿ 2016 ರಲ್ಲಿ ರಚಿಸಿದ್ದರೆನ್ನಲಾದ “ಬಿಜೆಪಿ” ಎನ್ನುವ ವಾಟ್ಸ್ಯಾಪ್ ಗ್ರೂಪ್ನಲ್ಲಿ ಅಸಭ್ಯ ವಿಡಿಯೋಗಳು ಹರಿದಾಡಿವೆ. ಪಕ್ಷದ ಕಾರ್ಯಚಟುವಟಿಕೆಗಳ ಬಗ್ಗೆ ಚರ್ಚಿಸಲು ಮತ್ತು ಇತರೆ ಮಾಹಿತಿಗಳನ್ನು ಹಂಚಿಕೊಳ್ಳಲು ರಚಿಸಿದ್ದ ಗ್ರೂಪ್ನಲ್ಲಿ ಕರಾವಳಿಯ ಶಾಸಕರು, ಹಾಲಿ ಹಾಗೂ ಮಾಜಿ ಬಿಜೆಪಿ ಜಿಲ್ಲಾ ಘಟಕದ ಅಧ್ಯಕ್ಷರು ಸೇರಿದಂತೆ ಪ್ರಮುಖ ಮುಖಂಡರು ಈ ಗ್ರೂಪ್ ನಲ್ಲಿದ್ದರು ಎನ್ನಲಾಗಿದೆ.
ಆದರೆ ಇಂತಹ ಗ್ರೂಪ್ನಲ್ಲಿ ಕಾರ್ಯಕರ್ತನೋರ್ವ ಕೆಟ್ಟ ವಿಡಿಯೋಗಳನ್ನು ಹರಿಯಬಿಟ್ಟಿದ್ದು, ಈ ಸುದ್ದಿ ಎಲ್ಲೆಡೆ ವೈರಲ್ ಆಗುತ್ತಿದೆ. ಈ ಘಟನೆಯಿಂದಾಗಿ ಜಿಲ್ಲಾ ಬಿಜೆಪಿಯ ಪ್ರಮುಖರು ಸೇರಿದಂತೆ ಕಾರ್ಯಕರ್ತರ ಮುಜುಗರಕ್ಕೆ ಕಾರಣವಾಗಿದೆ.