ಬೆಂಗಳೂರು,ನ 21(MSP): ಸ್ಯಾಂಡಲ್ವುಡ್ನಲ್ಲಿ ಮುದ್ದಾದ ಜೋಡಿ ಎನಿಸಿಕೊಂಡಿರುವ ದೂದ್ಪೇಡ ಖ್ಯಾತಿಯ ದಿಗಂತ್ ಮಂಚಾಲೆ ಮತ್ತು ನಟಿ ಐಂದ್ರಿತಾ ರೇ ಅವರ ವಿವಾಹ ದಿನಾಂಕ ನಿಗದಿಯಾಗಿದೆ. ಕಳೆದ 8 ವರ್ಷಗಳಿಂದ ಪ್ರೀಯ ಬಲೆಗೆ ಬಿದ್ದಿದ್ದ ಸ್ಯಾಂಡಲ್ ವುಡ್ ಈ ನಟ ನಟಿ ಸದ್ಯದಲ್ಲೇ ದಂಪತಿಗಳಾಗಳಿದ್ದಾರೆ ಎನ್ನುವ ಸುದ್ದಿ ಹೊರಬಿದ್ದಿದೆ.
ಕಳೆದ ಕೆಲವು ದಿನಗಳಿಂದ ಯಾರ ಕಣ್ಣಿಗೂ ಕಾಣಿಸಿಕೊಳ್ಳದೆ ಇದ್ದ ಈ ಕ್ಯೂಟ್ ಜೋಡಿ ತಮ್ಮ ವಿವಾಹ ಡಿಸೆಂಬರ್ 11 ಮತ್ತು 12 ರಂದು ನಡೆಯಲಿದೆ ಎಂದು ಸ್ಪಷ್ಟಪಡಿಸಿದ್ದಾರೆ. ಇನ್ನು ಈ ಬಗ್ಗೆ ಐಂದ್ರಿತಾ ಅವರು ಸಾಮಾಜಿಕ ತಾಣಗಳಲ್ಲಿ ತಮ್ಮ ಖುಷಿಯನ್ನು ಹಂಚಿಕೊಂಡಿದ್ದು, ’ನನ್ನ ನೆಚ್ಚಿನ ಸ್ನೇಹಿತನನ್ನು ವಿವಾಹವಾಗಲು ಉತ್ಸುಕಳಾಗಿದ್ದೇನೆ ’ ಎಂದು ಬರೆದುಕೊಂಡಿದ್ದಾರೆ.
2009 ರಲ್ಲಿ ಮನಸಾರೆ ಚಿತ್ರದಲ್ಲಿ ಜೋಡಿಯಾಗಿ ನಟಿಸುವ ವೇಳೆ ಇಬ್ಬರ ನಡುವೆ ಪ್ರೀತಿ ಮೊಳಕೆಯೊಡೆದಿತ್ತು. ಇನ್ನು ಡಿಸೆಂಬರ್ 11 ಹಳದಿ ಕಾರ್ಯಕ್ರಮಹಾಗೂ 12 ರಂದು ಮದುವೆ ಶಾಸ್ತ್ರ ನಡೆಯಲಿದೆ.