ನವದೆಹಲಿ, ನ 21(MSP): ಟೆಲಿಕಾಮ್ ಸಂಸ್ಥೆಗಳು ನಷ್ಟದಲ್ಲಿದ್ದು ಹೇಗಾದರೂ ಮಾಡಿ ತಮ್ಮ ಆದಾಯ ಹೆಚ್ಚಿಸಿಕೊಳ್ಳಲೇ ಬೇಕು ಎಂದು ನಿರ್ಧಾರ ಮಾಡಿರುವ ಗ್ರಾಹಕರ ಇದೀಗ ಇನ್ ಕಮಿಂಗ್ ಕಾಲ್ ಗಳಿಗೂ ದರ ವಿಧಿಸುವ ಕುರಿತು ಚಿಂತನೆ ನಡೆಸುತ್ತಿವೆ. ಹೌದು ಮಾರುಕಟ್ಟೆಯಲ್ಲಿ ಜಿಯೋ ಕಾಲಿಟ್ಟ ಬಳಿಕ ಲಾಭ ಮಾಡುವುದು ಇರಲಿ ತಮ್ಮ ಅಸ್ಥಿತ್ವವನ್ನೇ ಉಳಿಸಿಕೊಳ್ಳಲು ಹೋರಾಟ ಮಾಡಬೇಕಾದ ಅನಿವಾರ್ಯತೆ ಸೃಷ್ಟಿಯಾಗಿದೆ.
ಜೀಯೋ ಬೀಸಿದ ಬಿರುಗಾಳಿಗೆ, ಉಳಿದ ಟೆಲಿಕಾಂ ಸಂಸ್ಥೆಗಳು ಲಾಭ ಮಾಡುವುದು ಬಿಡಿ ಹಾಕಿದ ಬಂಡವಾಳ ಕೂಡ ವಾಪಸ್ ಬರುತ್ತಿಲ್ಲವಲ್ಲ ಎಂದು ತಲೆಕೆಡಿಸಿಕೊಂಡಿದ್ದಾರೆ. ಅಲ್ಲದೆ ಟೆಲಿಕಾಂ ಸಂಸ್ಥೆ ತಮ್ಮ ನಷ್ಟಕ್ಕೆ ಉಚಿತ ಒಳಬರುವ ಕರೆಗಳೇ ಎಂದು ಮನದಟ್ಟು ಮಾಡಿಕೊಂಡಿದೆ. ಹಳ್ಳಿಗಳಲ್ಲಿ ಮೊಬೈಲ್ ಸೇವೆ ಒಳಬರುವ ಕರೆಗಳಿಗೆ ಮಾತ್ರ ಸೀಮಿತವಾಗಿದೆ. ಅಲ್ಲದೆ ಸೇವೆ ಮುಂದುವರಿಸಲು ರಿಚಾರ್ಜ್ ಅವಶ್ಯಕತೆ ಇದ್ದರೂ ರಿಚಾರ್ಜ್ ಮಾಡದೇ 10 ರೂ. ಗೆ ಸಿಗುವ ಸಿಮ್ ಗಾಗಿ , ಸಿಮ್ ಕಾರ್ಡ್ ಗಳನ್ನೇ ಬದಲಿಸುತ್ತಿದ್ದಾರೆ.
ಭಾರ್ತಿ ಏರ್ ಟೆಲ್ ಸಂಸ್ಥೆ ಈಗಾಗಲೇ ಉಚಿತ ಇನ್ ಕಮಿಂಗ್ ಕಾಲ್ ಗಳ ಸೇವೆ ಸ್ಥಗಿತಗೊಳಿಸಿ ಇನ್ ಕಮಿಂಗ್ ಕಾಲ್ ಗಳಿಗೂ ದರ ವಿಧಿಸಲು ಸಿದ್ದತೆ ಮಾಡಿಕೊಂಡಿದೆ. ಈಗಾಗಲೇ ಏರ್ ಟೆಲ್ ಇದಕ್ಕಾಗಿ ಮೂರು ಪ್ಲಾನ್ ಗಳನ್ನು ಪರಿಚಯಿಸಿದ್ದು, ರೂಪಾಯಿ 35, ರೂಪಾಯಿ 65 ಹಾಗೂ ರೂಪಾಯಿ 9ಗಳ ಪ್ಲಾನ್ ಗಳಲ್ಲಿ 35 ರೂಪಾಯಿಗಳ ಪ್ಲಾನ್ ನಲ್ಲಿ 28 ದಿನಗಳಿಗೆ 26 ರೂಗಳ ಟಾಕ್ ಟೈಮ್ ನೀಡಿ 100 ಎಂಬಿ ಡಾಟಾ ನೀಡುವ ಬಗ್ಗೆ ಹೇಳಿಕೊಂಡಿದೆ.