ಬಂಟ್ವಾಳ,ನ 22(MSP): ದಂಪತಿಗಳಿಬ್ಬರು ನೇಣು ಬಿಗಿದು ಆತ್ಮಹತ್ಯೆಗೆ ಶರಣಾದ ಘಟನೆ ಬಂಟ್ವಾಳದ ಮಣಿನಾಲ್ಕೂರು ಪತ್ತನಾಡಿ ಎಂಬಲ್ಲಿ ನ.೨೨ರ ಗುರುವಾರ ನಡೆದಿದೆ. ಇನ್ನು ಆತ್ಮಹತ್ಯೆ ಮಾಡಿಕೊಂಡವರನ್ನು ಇಲ್ಲಿನ ಸ್ಥಳೀಯ ನಿವಾಸಿ ಪ್ರೇಮನಾಥ ಪೂಜಾರಿ ಹಾಗೂ ಚಂದ್ರಾವತಿ ಎಂದು ಗುರುತಿಸಲಾಗಿದೆ.
ಪತ್ನಿ ಚಂದ್ರಾವತಿ ಮನೆಯೊಳಗಿನ ಪಕ್ಕಾಸಿಗೆ ನೇಣುಬಿಗಿದು ಆತ್ಮಹತ್ಯೆ ಮಾಡಿಕೊಂಡರೆ. ಪತಿ ಪ್ರೇಮನಾಥ ಬಾವಿಯಲ್ಲಿ ಹಗ್ಗ ಹಾಕಿ ಆತ್ಮಹತ್ಯೆಗೈದಿದ್ದಾರೆ. ಗುರುವಾರ ಬೆಳಿಗ್ಗೆ ಪತಿ ಪ್ರೇಮನಾಥ ಪೂಜಾರಿ ತಮ್ಮ ಮಗನಿಗೆ ಕರೆ ಮಾಡಿದ್ದು, ನಾವಿಬ್ಬರೂ ಆತ್ಮಹತ್ಯೆ ಮಾಡಿಕೊಳ್ಳುವುದಾಗಿ ತಿಳಿಸಿ ತಕ್ಷಣವೇ ಕರೆ ಕಟ್ ಮಾಡಿದ್ದಾರೆ ಎನ್ನಲಾಗಿದೆ. ದಂಪತಿಗಳ ಮದ್ಯೆ ಪ್ರತಿ ನಿತ್ಯ ಜಗಳ ನಡೆಯುತ್ತಿದ್ದು ಇದೇ ಕಾರಣಕ್ಕೆ ಆತ್ಮಹತ್ಯೆಗೆ ಶರಣಾಗಿದ್ದಾರೆ ಎಂದು ತಿಳಿದುಬಂದಿದೆ. ಸ್ಥಳಕ್ಕೆ ಗ್ರಾಮಾಂತರ ಠಾಣಾ ಎಸ್ಸೈ ಪ್ರಸನ್ನ ಕುಮಾರ್ ಭೇಟಿ ನೀಡಿದ್ದು, ಪ್ರಕರಣವನ್ನು ದಾಖಲಿಸಿಕೊಂಡಿದ್ದಾರೆ.