ಮಂಗಳೂರು, ನ 22(MSP): ರಾಜ್ಯದಲ್ಲಿ ಆಡಳಿತದಲ್ಲಿರುವ ಕಾಂಗ್ರೆಸ್ ಜೆಡಿಎಸ್ ಸಮ್ಮಿಶ್ರ ಸರಕಾರದ ಕುರ್ಚಿ ಅಲುಗಾಡುತ್ತಿದೆ. ಅದನ್ನು ಸ್ಥಿರವಾಗಿ ನಿಲ್ಲಿಸುವುದು ಹೇಗೆ ಎಂಬ ಲೆಕ್ಕಾಚಾರದಲ್ಲಿ ಅವರಿದ್ದಾರೆ. ಹೀಗಾಗಿ ಕಬ್ಬು ಬೆಳೆಗಾರರ ಬಗ್ಗೆ ಚಿಂತಿಸಲು, ಅವರ ಸಮಸ್ಯೆಗಳಿಗೆ ಸ್ಪಂದಿಸಲು ಸರಕಾರಕ್ಕೆ ಸಮಯವಿಲ್ಲ ಎಂದು ಕೇಂದ್ರ ರಾಸಾಯನಿಕ ಗೊಬ್ಬರ ಖಾತೆಗಳ ಸಚಿವ ಡಿ ವಿ ಸದಾನಂದ ಗೌಡ ಹೇಳಿದ್ದಾರೆ.
ಮಂಗಳೂರು ನಲ್ಲಿ ಮಾಧ್ಯಮದವರೊಂದಿಗೆ ಮಾತನಾಡಿದ ಕೇಂದ್ರ ಸಚಿವ ಡಿ.ವಿ ಸದಾನಂದ ಗೌಡ ಕೇಂದ್ರ ಸರಕಾರ ಸಕ್ಕರೆ ಕಂಪನಿ ಮಾಲೀಕರಿಗೆ ಬಡ್ಡಿ ರಹಿತ ಹಣ ನೀಡಿ ಕಬ್ಬು ಬೆಳೆಗಾರರಿಂದ ಕಬ್ಬು ಮಾಡುವಂತೆ ಹೇಳಿತ್ತು. ಆದರೆ ಅದನ್ನು ಕಂಪನಿಗಳು ಮಾಡಿಲ್ಲ. ಈಗಾಗಲೇ ಹಲವು ರಾಜ್ಯಗಳು ಕಬ್ಬು ಖರೀದಿ ಕೇಂದ್ರವನ್ನು ಆರಂಭಿಸಿ ಕಬ್ಬನ್ನು ಖರೀದಿ ಮಾಡುತ್ತಿವೆ .ಆದರೆ ಕರ್ನಾಟಕ ರಾಜ್ಯದಲ್ಲಿ ಮಾತ್ರ ಇನ್ನೂ ಸರಕಾರ ಕಬ್ಬು ಖರೀದಿ ಕೇಂದ್ರ ಆರಂಭಿಸಿಲ್ಲ ಎಂದು ಕಳವಳ ವ್ಯಕ್ತಪಡಿಸಿದರು.
ಮುಖ್ಯಮಂತ್ರಿಗಳು ಕಬ್ಬು ಬೆಳಗಾರರ ಸಭೆಯನ್ನು ಕರೆದರೂ ಅದರಲ್ಲಿ ಅವರದ್ದೇ ಸಚಿವ ಸಂಪುಟದ ಸಹೋದ್ಯೋಗಿಯ ಸಕ್ಕರೆ ಕಂಪನಿ ಮಾಲೀಕರಾದವರು ಭಾಗವಹಿಸಿಲ್ಲ. ಅವರನ್ನು ತಕ್ಷಣವೇ ಸಂಪುಟದಿಂದ ವಜಾ ಮಾಡಿ ಇಲ್ಲದಿದ್ದಲ್ಲಿ ಅವರ ಮನವೊಲಿಸಿ ಕಬ್ಬು ಬೆಳೆಗಾರರಿಗೆ ಹಣ ನೀಡುವಂತೆ ಮಾಡಲಿ ಎಂದು ಹೇಳಿದರು .ಕಬ್ಬು ಬೆಳೆಗಾರರ ಹಿತ ಕಾಪಾಡಲು ರಾಜ್ಯ ಸರಕಾರ ವಿಫಲವಾಗಿದೆ ಎಂದು ಆರೋಪಿಸಿದರು