ಮಂಗಳೂರು, ನ 22(SM): ಅತೀ ವೇಗದ ಚಾಲನೆಯಿಂದ ಬೈಕ್ ಸವಾರರಿಬ್ಬರು ನದಿಗೆ ಬಿದ್ದು ಮೃತಪಟ್ಟಿರುವ ಘಟನೆ ನಗರದ ಕೂಳೂರು ಸೇತುವೆಯ ಬಳಿ ನಡೆದಿದೆ. ಆಕಾಶ್ ಭವನದ ನಿಖಿಲ್(21) ಹಾಗೂ ಕೂಳೂರಿನ ವಿಜಯ್(22) ನದಿಗೆ ಬಿದ್ದು ಮೃತಪಟ್ಟವರು.
ಯುವಕರಿಬ್ಬರು ಕುಳೂರು ಸೇತುವೆ ಸಮೀಪದ ಕೆಳಗಡೆಯ ರಸ್ತೆಯಲ್ಲಿ ಅತೀ ವೇಗವಾಗಿ ಬೈಕ್ ಗಳನ್ನು ಚಲಾಯಿಸಿಕೊಂಡು ತೆರಳಿದ್ದಾರೆ. ಈ ಸಂದರ್ಭ ಬೈಕ್ ಗಳು ಮುಖಾಮುಖಿ ಡಿಕ್ಕಿಯಾಗಿವೆ. ಅಪಘಾತದ ರಭಸಕ್ಕೆ ಇಬ್ಬರು ಬೈಕ್ ಸವಾರಿ ನಡೆಸುತ್ತಿದ್ದ ಯುವಕರು ನದಿಗೆ ಬಿದ್ದಿದ್ದಾರೆ. ಅಲ್ಲದೆ ಒಂದು ಬೈಕ್ ಕೂಡ ನೀರಿಗೆ ಎಸೆಯಲ್ಪಟ್ಟಿದೆ. ಎಸೆಯಲ್ಪಟ್ಟ ರಭಸಕ್ಕೆ ಯುವಕರು ನೀರಿನಲ್ಲಿ ಮುಳುಗಿದ್ದು, ಅಲ್ಲೇ ಪ್ರಾಣ ಕಳೆದುಕೊಂಡಿದ್ದಾರೆ.
ಇನ್ನು ಘಟನೆಯ ಮಾಹಿತಿ ಪಡೆದ ಮಂಗಳೂರು ಪೊಲೀಸ್ ಅಧಿಕಾರಿಗಳು ಸ್ಥಳಕ್ಕೆ ಭೇಟಿ ನೀಡಿ, ಪರಿಶೀಲನೆ ನಡೆಸಿದ್ದಾರೆ.
ಪೊಲೀಸರು ಕೇಸು ದಾಖಲಿಸಿಕೊಂಡು ತನಿಖೆ ಮುಂದುವರೆಸಿದ್ದಾರೆ.