ಉಡುಪಿ ,ನ 23(MSP): ಭಾರತೀಯ ಜನತಾ ಪಾರ್ಟಿಯ ರಾಷ್ಟ್ರೀಯ ನಾಯಕ ಅನಂತ್ಕುಮಾರ್ ಅವರಿಗೆ ಸಾರ್ವಜನಿಕ ನೆಲೆಯಲ್ಲಿ ರಾಜಕೀಯ ರಹಿತವಾಗಿ ಶ್ರದ್ಧಾಂಜಲಿ ಸಭೆ ಗುರುವಾರ, ನವೆಂಬರ್ ೨೨ರಂದು ಉಡುಪಿ ಅಜ್ಜರಕಾಡು ಪುರಭವನದಲ್ಲಿ ನಡೆಯಿತು.
ಪರಮಪೂಜ್ಯ ಪೇಜಾವರ ಶ್ರೀಗಳಾದ ವಿಶ್ವೇಶ ತೀರ್ಥ ಸ್ವಾಮೀಜಿಯವರು, ಇತರ ರಾಜಕೀಯ ನಾಯಕರು ಸೇರಿದಂತೆ ಸಚಿವ ಅನಂತ್ ಕುಮಾರ್ ಭಾವಚಿತ್ರಕ್ಕೆ ಪುಷ್ಪ ನಮನ ಸಲ್ಲಿಸಿದರು.
ನಂತರ ಮಾತನಾಡಿ, ದಿ.ಅನಂತ್ ಕುಮಾರ್ ಉತ್ತಮ ಸೇವೆಯನ್ನು ರಾಷ್ಟ್ರಕ್ಕೂ ರಾಜ್ಯ ಕ್ಕೂ ಸಲ್ಲಿಸಿದ್ದಾರೆ. ಚುನಾವಣೆ ಯ ಉಸ್ತುವಾರಯನ್ನು ಉತ್ತಮ ರೀತಿ ನಿಭಾಯಿಸಿದ್ದಾರೆ. ಅವರ ಸಾಮರ್ಥ್ಯ ವನ್ನು ದೇಶವೇ ಕಂಡಿದೆ. ಪ್ರದಾನ ಮಂತ್ರಿ ಮೋದಿಯವರ ವಿಶ್ವಾಸ ಪಾತ್ರರಾಗಿದ್ದರು. ಹಾಗಾಗಿ ಬೇರೆ ರಾಜ್ಯದ ಚುನಾವಣಾ ಉಸ್ತುವಾರಿ ಯನ್ನು ವಹಿಸಿಕೊಟ್ಟಿದ್ದರು. ಅವರ ವಿನಯತೆ, ಲವಲವಿಕೆಯಿಂದ ಎಲ್ಲರನ್ನೂ ಪ್ರೀತಿ ಪಾತ್ರರಾಗಿದ್ರು. ಅವರ ಜೊತೆ ಕಾಲಹರಣ ಮಾಡುವುದೇ ಖುಷಿಯ ವಿಚಾರ. ನಾಲ್ಕನೇ ಪರ್ಯಾಯ ದಿಂದ ಐದನೇ ಪರ್ಯಾಯ ದವರೆಗೂ ನನ್ನ ಅವರ ಸಂಪರ್ಕ ನಿರಂತರವಾಗಿತ್ತು. ಪಕ್ಷಬೇಧವಿಲ್ಲದೆ ಎಲ್ಲರೊಂದಿಗೆ ಬೆರೆಯುವ ಗುಣ ಅವರದ್ದು. ನಾಲ್ಕನೇ ಪರ್ಯಾಯದಲ್ಲಿ ಕನಕ ಮಂಟಪ ನಿರ್ಮಿಸುವಲ್ಲಿ ಪ್ರಮುಖ ಪಾತ್ರ ವಹಿಸಿದ್ದರು. ಅಲ್ಲದೆ ಪಾಜಕ ಕ್ಷೇತ್ರದ ಅಭಿವೃದ್ಧಿ, ಬೆಂಗಳೂರಿನ ಪಿಪಿಸಿ ಕಾಲೇಜು ಹಾಗೂ ದಿಲ್ಲಿಯ ಸಂಸ್ಥೆಯ ಅಬಿವೃದ್ದಿಯಲ್ಲಿಯೂ ಮುಖ್ಯ ಪಾತ್ರ ವಹಿಸಿದ್ದರು. ಸಾಮಾಜಿಕ ಹಾಗೂ ಆಧ್ಯಾತ್ಮಿಕ ಕಾರ್ಯಕ್ರಮ ಗಳಿಗೆ ಉತ್ತೇಜನ ನೀಡಿದ್ದಾರೆ. ಇಂತಹ ನೇತಾರ ಯುವಜನತೆಗೆ ಸ್ಫೂರ್ತಿ ಯಾಗಲಿ ಎಂದು ಆಶಿಸಿದರು. ಇಂತಹ ಉತ್ತಮ ನಾಯಕನಿಗೆ ದೇವರು ಸದ್ಗತಿ ಕರುಣಿಸಲಿ. ನೂರಾರು ಅನಂತ್ ಕುಮಾರ್ ನಂತಹ ನಾಯಕರು ದೇಶದಲ್ಲಿ ಮತ್ತೆ ಹುಟ್ಟಿಬರಲಿ. ಎಲ್ಲಾ ರಾಜಕೀಯ ನೇತಾರರು, ಪಕ್ಷದ, ರಾಜ್ಯದ, ರಾಷ್ಟ್ರದ ಅಭಿವೃದ್ಧಿ ಗೆ ಪಕ್ಷಬೇಧ ಮರೆತು ಕೆಲಸ ಮಾಡಲಿ ಎಂದು ಆಶಿಸಿದರು.
ರಾಜ್ಯ ಪ್ರಧಾನ ಕಾರ್ಯದರ್ಶಿ ಶಾಸಕ ಸಿ.ಟಿ.ರವಿ ಈ ಸಂದರ್ಭದಲ್ಲಿ ಮಾತನಾಡಿ, 'ರಾಜ್ಯಾಧ್ಯಕ್ಷ ಯಡಿಯೂರಪ್ಪ ನವರು ರಾಜ್ಯದ ಹಾರ್ಡ್ ವೇರ್ ಆಗಿದ್ರೆ, ದಿ. ಅನಂತ್ ಕುಮಾರ್ ಸಾಪ್ಟ್ ವೇರ್ ನಂತೆ ಕೆಲಸ ಮಾಡುತ್ತಿದ್ದರು. ಎಲ್ಲ ಪಕ್ಷದ ಶಾಸಕ, ಸಂಸದರಿಗೆ ಪರಸ್ಪರ ನೆರವಾಗುತ್ತಿದ್ದರು. ಕರ್ನಾಟಕ, ದಕ್ಷಿಣ ಕರ್ನಾಟಕ ಹಾಗೂ ದೆಹಲಿಗೆ ಕೊಂಡಿಯಾಗಿ ದ್ದರು. ಅವರಂತೆ ನಾಯಕತ್ವ ಗುಣ ಇನ್ನಾರಿಗೂ ಬರಲು ಅಸಾಧ್ಯ.
ಅವರ ಅನಾರೋಗ್ಯ ದ ವಿಚಾರವನ್ನು ತನ್ನ ಮಕ್ಕಳಿಗೆ ತಿಳಿಸಿದಂತೆ ಪ್ರಮಾಣ ತೆಗೆದುಕೊಂಡಿದ್ದರು. ಅವರ ಸಾವು ಇಡೀ ದೇಶಕ್ಕೆ ಅನಿರೀಕ್ಷಿತ. ಎಲ್ಲರೂ ಅನಾರೋಗ್ಯದ ಕಾರಣದಿಂದ ದೈನ್ಯತೆಯಿಂದ ಕಾಣಬಹುದು ಇಷ್ಟವಿರಲಿಲ್ಲ. ಜನತೆ ತನ್ನ ಹಳೇ ಮುಖ ನೆನಪಿರಬೇಕು ಎನ್ನುವುದು ಅವರ ವಿಚಾರವಾಗಿತ್ತು. ಸಾವು ಖಾತ್ರಿ ಎಂದು ತಿಳಿದಿದ್ದರೂ ತಮ್ಮ ರಾಜಕೀಯ ಕೆಲಸದಲ್ಲಿ ಅಂಜಲಿಲ್ಲ. ಅವರ ವಿಶಿಷ್ಟ ಕಾರ್ಯ ವೈಖರಿಯಿಂದ ಖಾತೆಗೂ, ಪಕ್ಷಕ್ಕೂ ಶ್ರೇಷ್ಟತೆಯನ್ನು ತಂದವರು, ಎಂದು ಸಿ ಟಿ ರವಿ ನೆನಪಿಸಿಕೊಂಡರು.
ವಿಧಾನ ಪರಿಷತ್ ವಿಪಕ್ಷ ನಾಯಕರಾದ ಕೋಟ ಶ್ರೀನಿವಾಸ ಪೂಜಾರಿ, ' ಅನಂತ್ ಕುಮಾರ್ ಒಬ್ಬ ಸೂಕ್ಷ್ಮ ಗ್ರಾಹಿ, ದೂರದರ್ಶಿತ್ವ ಉಳ್ಳ ಅಪ್ಪಟ ರಾಜಕಾರಣಿ. ಕರ್ತವ್ಯ ಮಾಡಬೇಕು ಫಲಿತಾಂಶ ನಿರೀಕ್ಷಿಸಬಾರದು ಎನ್ನುವುದು ಅವರ ನಿಲುವಾಗಿತ್ತು. ಅನೇಕ ವಿಚಾರದಲ್ಲಿ ರಾಜಕೀಯ ನಾಯಕರುಗಳನ್ನು ತಿದ್ದುತ್ತಿದ್ದರು. ಅವರ ಆದರ್ಶಗಳನ್ನು ಎಲ್ಲರೂ ಅಳವಡಿಸಿಕೊಂಡರೆ ಕರ್ನಾಟಕ ದಲ್ಲಿ ಬಿಜೆಪಿ ಇನ್ನಷ್ಟು ಶಕ್ತಿಯುತ ವಾಗಿ ಬೆಳೆಯುತ್ತದೆ ಎಂದರು.
ರಾಜ್ಯ ಬಿಜೆಪಿ ಪ್ರಧಾನ ಕಾರ್ಯದರ್ಶಿ ಸಂಸದೆ ಶೋಭಾ ಕರಂದ್ಲಾಜೆ, 'ಅವರೊಂದಿಗೆ ನಿರಂತರ ಕೆಲಸ ಮಾಡುವ ಅವಕಾಶ ನನಗೆ ಲಭಿಸಿತ್ತು. ಬಿಜೆಪಿಯಲ್ಲಿ ಅನಂತ್ ಕುಮಾರ್ ಇಲ್ಲದೆ ಶಿರವನ್ನು ಕಳೆದುಕೊಂಡಾಂತಾಗಿದೆ. ಸರಕಾರವನ್ನು ಸಂಘಟನೆಯ ನ್ನು ಒಟ್ಟಿಗೆ ಕೊಂಡೊಯ್ಯುವ ಲ್ಲಿ ಪ್ರಮುಖ ಪಾತ್ರ ವಹಿಸಿದ್ದರು. ರಾಜ್ಯದ ಅಧ್ಯಕ್ಷ ರಾಗಿ ಮಾತಿಗೆ ತಪ್ಪದಂತೆ ಕೆಲಸ ಮಾಡಿದ್ದರು. ಅವರು ಆಸ್ಪತ್ರೆ ಸೇರಿದ ಮೇಲೆ ನೋಡುವ ಅವಕಾಶ ಸಿಗಲಿಲ್ಲ. ದಿ. ವಾಜಪೇಯಿ ಯವರ ಚಿತಾ ಭಸ್ಮ ದ ಪ್ರವಾಸದಲ್ಲಿ ತಮ್ಮನ್ನು ಸಕ್ರಿಯ ತೊಡಗಿಸಿದ್ರು. ದೇಹ ತುಂಬಾ ಕೃಷವಾಗಿತ್ತು ಆದರೂ ದೃತಿಗೆಡದೆ, ರಾಷ್ಟ್ರೀಯಾಧ್ಯಕ್ಷ ರ ಆಣತಿಯಂತೆ ರಾಜ್ಯದಲ್ಲೆಡೆ ಪಾದರಸದಂತೆ ಕೆಲಸ ಮಾಡಿದ್ದರು. ಅನಂತ್ ಅವರಿಗೆ ಅವರೇ ಸಾಟಿ. ಯಾರೂ ನಿರೀಕ್ಷೆ ಮಾಡಲಾಗದ ಘಟನೆ ದೇಶದಲ್ಲಿ ನಡೆದು ಹೋಯಿತು.
ಜಿಲ್ಲೆ ಯ ಶಾಸಕರಾದ ಕೆ.ರಘುಪತಿ ಭಟ್, ವಿ.ಸುನೀಲ್ ಕುಮಾರ್, ಲಾಲಾಜಿ ಆರ್.ಮೆಂಡನ್, ಹಾಲಾಡಿ ಶ್ರೀನಿವಾಸ ಶೆಟ್ಟಿ, ಬಿ.ಎಂ.ಸುಕುಮಾರ್ ಶೆಟ್ಟಿ, ಮಾಜಿ ಸಂಸದ ಜಯಪ್ರಕಾಶ್ ಹೆಗ್ಡೆ, ಜಿಲ್ಲಾ ಬಿಜೆಪಿ ಅಧ್ಯಕ್ಷರಾದ ಮಟ್ಟಾರು ರತ್ನಾಕರ ಹೆಗ್ಡೆ, ಹಿರಿಯ ನಾಯಕ ಸೋಮಶೇಖರ್ ಭಟ್ ಸಹಿತ ಇತರೆ ಗಣ್ಯರು ಭಾಗವಹಿಸಿದ್ದರು.