ರಾಜಸ್ತಾನ,ನ 23(MSP): ರಾಜಸ್ತಾನದಲ್ಲಿ ವಿಧಾನಸಭೆ ಚುನಾವಣೆಯ ಹವಾ ಜೋರಾಗಿ ಬೀಸತೊಡಗಿದೆ. ಈ ನಡುವೆ ಚುನಾವಣೆಗೆ, ಪಕ್ಷದ ನೀತಿ ಪಾಲಿಸಿದೇ ಬಂಡಾಯ ಎದ್ದ ವಸುಂದರಾ ರಾಜೇ ಸಂಪುಟದ 4 ಸಚಿವರು ಸೇರಿದಂತೆ 11 ಬಂಡಾಯಗಾರರನ್ನು ರಾಜಸ್ತಾನ ಬಿಜೆಪಿ ವಜಾಗೊಳಿಸಿ ಆದೇಶ ನೀಡಿದೆ.
ಚುನಾವಣೆಗೆ ಸ್ಪರ್ಧಿಸುವ ಬಿಜೆಪಿಗರ ಪಟ್ಟಿಯನ್ನು ಬಿಡುಗಡೆ ಮಾಡಿತ್ತು. ಆದರೆ ಪಕ್ಷದ ಸೂಚನೆಯನ್ನು ಕಡೆಗಣಿಸಿ, ಆಯ್ಕೆ ಮಾಡಿದ ಅಭ್ಯರ್ಥಿಗಳಿಗೆ ಅವಕಾಶ ನೀಡದೆ ಬಂಡಾಯ ಅಭ್ಯರ್ಥಿಗಳು ನಾಮಪತ್ರ ಸಲ್ಲಿಸಿದ್ದರು, ಅದ್ದರಿಂದ ಬಂಡಾಯದ ಬಾವುಟ ಹಿಡಿದುಕೊಂಡಿದ್ದ 11 ಮಂದಿಯನ್ನು ಪಕ್ಷದಿಂದ ವಜಾಗೊಳಿಸಲಾಗಿದೆ. ಇದನ್ನು ಬಿಜೆಪಿಯ ಪತ್ರಿಕಾ ಪ್ರಕಟಣೆ ಸ್ಪಷ್ಟಗೊಳಿಸಿದೆ.
ಡಿಸೆಂಬರ್ 7 ರಂದು ರಾಜಸ್ತಾನ ವಿಧಾನಸಭೆಗೆ ಚುನಾವಣೆ ನಡೆಯಲಿದ್ದು ಮುಖಂಡರಾದ ಸುರೇಂದ್ರ ಗೋಯಲ್, ಲಕ್ಷ್ಮಿ ನಾರಾಯಣ್ ದೇವ್, ಸೇರಿದಂತೆ 11 ಮಂದಿಯನ್ನು ವಜಾಗೊಳಿಸಲಾಗಿದೆ. ವಸುಂದರಾ ರಾಜೆ ಅವರಿಗೆ ಬಿಜೆಪಿಯ ಬಂಡಾಯಗಾರರು ಮುಜುಗರ ಮಾಡುವಂತೆ ವರ್ತಿಸಿದ್ದರು .