ಮಂಡ್ಯ, ನ24(SS): ರೈತರು ಸರ್ಕಾರದ ಮೇಲಿರುವ ಭರವಸೆಯನ್ನು ಕಳೆದುಕೊಳ್ಳಬಾರದು. ನಮ್ಮ ಸರ್ಕಾರ ರೈತರ ಪರವಾಗಿದ್ದು, ರೈತರು ತಾಳ್ಮೆಯಿಂದಿರಬೇಕು. ಯಾವುದೇ ಕಾರಣಕ್ಕೂ ಸರ್ಕಾರದ ಮೇಲಿರುವ ಭರವಸೆಯನ್ನು ಕಳೆದುಕೊಳ್ಳಬಾರದು ಎಂದು ಮುಖ್ಯಮಂತ್ರಿ ಕುಮಾರಸ್ವಾಮಿಯವರು ಹೇಳಿದ್ದಾರೆ.
ಮಂಡ್ಯದಲ್ಲಿ ರೈತನ ಸಾವಿಗೆ ನಾನು ಕಾರಣನಲ್ಲ. ಆದರೆ, ರೈತ ಸಂಘದ ಹೆಸರು ಹೇಳಿಕೊಂಡು ಕೆಲವರು ನನ್ನ ವಿರುದ್ಧ ಚಿತಾವಣೆ ನಡೆಸಿದ್ದಾರೆ. ಕ್ಯಾನ್ಸರ್ ಕಾಯಿಲೆಯಿಂದ ಬಳುತ್ತಿದ್ದ ವ್ಯಕ್ತಿ ಸಾವನ್ನೇ ಮುಂದಿಟ್ಟುಕೊಂಡು ಸಿಎಂಗೆ ರೈತನಿಂದ ಆತ್ಮಹತ್ಯೆ ಸ್ವಾಗತ ಎಂದು ತಿರುಚಲಾಗಿದೆ ಎಂದು ದೂರಿದ್ದಾರೆ.
ರೈತರ ರಕ್ಷಣೆಗೆ ಉತ್ತಮ ಕಾರ್ಯಗಳನ್ನು ಸರ್ಕಾರ ಮಾಡುತ್ತಿದೆ. ಆತ್ಮಹತ್ಯೆ ಮಾಡಿಕೊಂಡ ರೈತ ಕ್ಯಾನ್ಸರ್ ರೋಗದಿಂದ ಬಳಲುತ್ತಿದ್ದ. ಕುಟುಂಬ ಸಹಾಯ ಕೇಳಿದ್ದ. ಇದನ್ನೇ ಬಳಕೆ ಮಾಡಿಕೊಳ್ಳುತ್ತಿರುವ ಮಾಧ್ಯಮಗಳು ವಿಚಾರವನ್ನು ದೊಡ್ಡದು ಮಾಡುತ್ತಿವೆ. ನಮ್ಮ ಸರ್ಕಾರ ರೈತರ ಪರವಾಗಿದ್ದು, ರೈತರು ಸರ್ಕಾರ ಮೇಲಿರುವ ಭರವಸೆಯನ್ನು ಕಳೆದುಕೊಳ್ಳಬಾರದು ಎಂದಿದ್ದಾರೆ.