ಮಂಗಳೂರು, ನ24(SS): ಎಂ.ಎಸ್.ಇ.ಝೆಡ್ ವ್ಯಾಪ್ತಿಯಲ್ಲಿರುವ ಜೆಬಿಎಫ್ ಪೆಟ್ರೋಕೆಮಿಕಲ್ಸ್ ಸಂಸ್ಥೆಯು ಕಳೆದ ಒಂದು ವರ್ಷದಿಂದ ತನ್ನ ಕಂಪೆನಿಯಲ್ಲಿರುವ ಖಾಯಂ ಉದ್ಯೋಗಿಗಳಿಗೆ ಮತ್ತು ಗುತ್ತಿಗೆ ಕಾರ್ಮಿಕರಿಗೆ ಸರಿಯಾಗಿ ವೇತನವನ್ನು ನೀಡದೇ ಇರೋದ್ರಿಂದ, ಕಾರ್ಮಿಕರೊಬ್ಬರು ಮನನೊಂದು ಆತ್ಮಹತ್ಯೆಗೆ ಯತ್ನಿಸಿರುವ ಘಟನೆ ವರದಿಯಾದಿದೆ.
ಉತ್ತರ ಪ್ರದೇಶ ಮೂಲದವರಾದ ಸಂಜಯ್ ಯಾದವ್ (36) ಆತ್ಮಹತ್ಯೆಗೆ ಯತ್ನಿಸಿದವರು.
ಉದ್ಯೋಗಿಗಳು ಮತ್ತು ಕಾರ್ಮಿಕರು ಹಲವು ಬಾರಿ ಜೆಬಿಎಫ್ ಪೆಟ್ರೋಕೆಮಿಕಲ್ಸ್ ಎಂಬ ಸಂಸ್ಥೆಯಲ್ಲಿ ಸರಿಯಾಗಿ ವೇತನ ನೀಡುವಂತೆ ಹಲವು ಬಾರಿ ಮನವಿ ಮಾಡಿದ್ದಾರೆ. ಆದರೆ ಸಂಸ್ಥೆಯು ಸರಿಯಾದ ಉತ್ತರ ನೀಡಿಲ್ಲ. ಪರಿಣಾಮ ಆರ್ಥಿಕ ಸಂಕಷ್ಟಕ್ಕೆ ಸಿಲುಕಿ, ಮಾನಸಿಕವಾಗಿ ಮನನೊಂದ 35 ಹರೆಯದ ಸಂಜಯ್ ಯಾದವ್ ಎಂಬ ಕಾರ್ಮಿಕ ಟವರ್ ಏರಿ ಆತ್ಮಹತ್ಯೆಗೆ ಯತ್ನಿಸಿದ್ದಾನೆ.
ಹಲವಾರು ವರುಷಗಳಿಂದ ಕಂಪನಿಯ ಅನೇಕ ಉದ್ಯೋಗಿಗಳು ಮತ್ತು ಗುತ್ತಿಗೆ ಕಾರ್ಮಿಕರು ಈ ಸಮಸ್ಯೆಯನ್ನು ಎದುರಿಸುತ್ತಿದ್ದಾರೆ. ಸಮಸ್ಯೆಯನ್ನು ಶೀಘ್ರ ಪರಿಹರಿಸದಿದ್ದರೆ ಮುಂದಿನ ದಿನಗಳಲ್ಲಿ ಕಾರ್ಮಿಕರು ಜೆಬಿಎಫ್ ಪೆಟ್ರೋಕೆಮಿಕಲ್ಸ್ ಸಂಸ್ಥೆಯ ವಿರುದ್ಧ ಪ್ರತಿಭಟನೆ ನಡೆಸುವ ಎಚ್ಚರಿಕೆಯನ್ನು ನೀಡಿದ್ದಾರೆ.
ಈ ಹಿಂದೆಯೂ ಜೆಬಿಎಫ್ ಕಂಪೆನಿಯು ಉದ್ಯೋಗಿಗಳಿಗೆ ಹುದ್ದೆಯಲ್ಲಿ ತಾರತಮ್ಯ, ವೇತನ ನೀಡದೆ ಸತಾಯಿಸಿರುವ ಘಟನೆಗಳು ವರದಿಯಾಗಿತ್ತು.