ಕೋಲಾರ, ನ24(SS): ಮಕ್ಕಳು ಕೆಟ್ಟವರಾಗಬಹುದೇ ಹೊರತು, ಹೆತ್ತ ತಾಯಿ ಎಂದೂ ಮಕ್ಕಳ ಪಾಲಿಗೆ ಕೆಟ್ಟವರಾಗಳು ಸಾಧ್ಯವಿಲ್ಲ ಎಂಬ ಮಾತನ್ನು ಈ ತಾಯಿ ಸುಳ್ಳು ಮಾಡಿದ್ದಾಳೆ. ಮಗು ಹುಟ್ಟಿದ ತಕ್ಷಣ ಮಗುವನ್ನು ತನ್ನ ಕೈಯಾರೆ ಕಟ್ಟಡದಿಂದ ಕೆಳಕ್ಕೆ ಬೀಸಾಡಿ ಕೊಂದು ತಾಯ್ತನಕ್ಕೇ ಕಳಂಕ ತಂದಿದ್ದಾಳೆ.
ಕೋಲಾರ ಹೊರ ವಲಯದಲ್ಲಿರುವ ನೂತನ ಜಿಲ್ಲಾಧಿಕಾರಿ ಕಚೇರಿ ಬಳಿ ಮಗುವಿನ ಮೃತ ದೇಹ ಪತ್ತೆಯಾಗಿದೆ. ಡಿಸಿ ಕಚೇರಿಯ ಶೌಚಾಲಯದಲ್ಲಿ ಮಗುವನ್ನು ಹೆತ್ತು, ಬಳಿಕ ಎರಡನೇ ಮಹಡಿಯಿಂದ ಮಗುವನ್ನು ಎಸೆದು ಕೊಂದಿರುವ ಶಂಕೆ ವ್ಯಕ್ತವಾಗಿದೆ.
ಸದ್ಯ ಸ್ಥಳದಲ್ಲಿ ಅಧಿಕಾರಿಗಳು ಸಿಸಿಟಿವಿ ಪರಿಶೀಲನೆ ನಡೆಸುತ್ತಿದ್ದಾರೆ. ಈ ಕುರಿತು ಕೋಲಾರ ಗ್ರಾಮಾಂತರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.