ಕಾಸರಗೋಡು ಅ16: ಕೇಂದ್ರ ಹಾಗೂ ರಾಜ್ಯ ಸರಕಾರಗಳ ಆಡಳಿತ ವೈಫಲ್ಯ ಹಾಗೂ ಪೆಟ್ರೋಲ್,ಡೀಸೆಲ್ ಉತ್ಪನ್ನಗಳ ಬೆಲೆಯೇರಿಕೆಯನ್ನು ಪ್ರತಿಭಟಿಸಿ ಕೇರಳದಲ್ಲಿ ವಿರೋಧ ಪಕ್ಷವಾದ ಯುಡಿಎಫ್ ಕರೆಕೊಟ್ಟ ಹರತಾಳ ಆರಂಭವಾಗಿದೆ.
ರಸ್ತೆಗಳಲ್ಲಿ ಖಾಸಿಗಿ ವಾಹನಗಳ ಸಂಚಾರ ವಿರಳವಾಗಿದೆ. ಖಾಸಾಗಿ ಬಸ್ಸುಗಳು ತಮ್ಮ ಓಡಾಟವನ್ನು ಸಂಪೂರ್ಣವಾಗಿ ಸ್ಥಗಿತಗೊಳಿಸಿವೆ. ರಾಜ್ಯ ಸಾರಿಗೆ ಸಂಸ್ಥೆಯ ಬಸ್ಸುಗಳು ಬೆಳಗ್ಗೆ ಓಡಾಟವನ್ನು ಆರಂಭಿಸಿದ್ದುವು ಆದರೆ ಅಲ್ಲಲ್ಲಿ ಕಲ್ಲೆಸೆತದ ಘಟಣೆಗಳು ಬೆಳಕಿದೆ ಬರುತ್ತಿದ್ದಂತೆಯೇ ಸಂಚಾರ ಮೊಟಕುಗೊಳಿಸಿದುವು. ತಿರುವನಂತಪುರಂ, ಆರ್ಯನಾಡ್, ವಿದುರ,ನೆಡುಮಂಗಾಡ್,ಪಾಲೇರಿವಟ್ಟಂ ಎಂಬ ಸ್ಥಳಗಳಲ್ಲಿ ಸಂಚಾರ ಆರಂಭಿಸಿದ ಸಾರಿಗೆ ಸಂಸ್ಥೆಯ ಬಸ್ಸುಗಳನ್ನು ಯುಡಿಎಫ್ ಬೆಂಬಲಿಗರು ತಡೆಹಿಡಿದ ಘಟನೆ ವರದಿಯಾಗಿದೆ.
ಅಹಿತಕರ ಘಟನೆಗಳನ್ನು ನಿಯಂತ್ರಿಸಲು ರಾಜ್ಯವ್ಯಾಪಿ ಬಿಗು ಬಂದೋಬಸ್ತು ಏರ್ಪಡಿಸಲಾಗಿದೆ. ರಸ್ತೆಗಳಲ್ಲಿ ಸಂಚರಿಸುವವರಿಗೆ,ವಾಹನ ಸವಾರರಿಗೆ ಸೂಕ್ತ ಭದ್ರತೆಯನ್ನು ಒದಗಿಸಲಾಗುವುದೆಂದು ಡಿಜಿಪಿ ಲೋಕನಾಥ ಬಹ್ರಾ ತಿಳಿಸಿದ್ದಾರೆ.
ಪೋಲಿಸ್ ರಕ್ಷಣೆ ದೊರಕಿದ್ದಲ್ಲಿ ವ್ಯಾಪಾರ ಸಂಸ್ಥೆಗಳನ್ನು ತೆರೆಯಲಾಗುವುದು ಎಂದು ವ್ಯಾಪಾರಿ ಏಕೋಪನ ಸಮಿತಿ ತಿಳಿಸಿದೆ.ಇಂದು ನಡೆಯಬೇಕಿದ್ದ ಕೇರಳ , ಎಂಜಿ ಹಾಗೂ ಕಣ್ಣೂರು ವಿಶ್ವವಿದ್ಯಾನಿಲಯದ ಎಲ್ಲಾ ಪರೀಕ್ಷೆಗಳನ್ನು ರದ್ದು ಪಡಿಸಲಾಗಿದೆ.