ಕಾಸರಗೋಡು, ನ 25(SM): ಕಾಸರಗೋಡಿನ ಪೆರ್ಲ ಸಮೀಪದ ಉಕ್ಕಿನಡ್ಕದಲ್ಲಿ ವೈದ್ಯಕೀಯ ಕಾಲೇಜು ಕಟ್ಟಡ ಶಿಲಾನ್ಯಾಸಕ್ಕೆ ಮುಖ್ಯಮಂತ್ರಿ ಪಿಣರಾಯಿ ವಿಜಯನ್ ಆಗಮಿಸುವ ಹಿನ್ನಲೆಯಲ್ಲಿ ಬಿಜೆಪಿ ಪ್ರತಿಭಟನೆಗೆ ಮುಂದಾಗಿದ್ದ ಬಿಜೆಪಿಗೆ ಮುಖಭಂಗವಾಗಿದೆ.
ಮುಖ್ಯಮತ್ರಿಯವರು ಇನ್ನೊಂದು ರಸ್ತೆಯಲ್ಲಿ ಕಾರ್ಯಕ್ರಮಕ್ಕೆ ಆಗಮಿಸಿದ ಹಿನ್ನೆಲೆಯಲ್ಲಿ ಬಿಜೆಪಿಯ ಪ್ರಯತ್ನ ವ್ಯರ್ಥವಾಗಿದೆ. ಮುಖ್ಯಮಂತ್ರಿ ಆಗಮಿಸುವ ಪ್ರಮುಖ ರಸ್ತೆಯಲ್ಲಿ ಬಿಜೆಪಿ ಕಾರ್ಯಕರ್ತರು ಪ್ರತಿಭಟನೆ ನಡೆಸಿ ಮುಖ್ಯಮಂತ್ರಿಯವರ ವಾಹನ ತಡೆಯುವ ಬಗ್ಗೆ ತೀರ್ಮಾನಿಸಿದ್ದರು. ಈ ಕುರಿತು ಮಾಹಿತಿ ತಿಳಿದ ಪೊಲೀಸರು ಮುಖ್ಯಮಂತ್ರಿ ಆಗಮನಕ್ಕೆ ಬದಲಿ ಮಾರ್ಗವನ್ನು ಸೂಚಿಸಿ, ಒಳದಾರಿಯಾಗಿ ಸುರಕ್ಷಿತವಾಗಿ ಕಾರ್ಯಕ್ರಮ ಸ್ಥಳಕ್ಕೆ ತಲುಪಿದರು.
ಸೀತಾಂಗೋಳಿ-ಬಾಡೂರು-ಪೆರ್ಲ ದಾರಿಯಾಗಿ ಮುಖ್ಯಮಂತ್ರಿಯವರು ಆಗಮಿಸಲು ತೀರ್ಮಾನಿಸಿದ್ದರು. ಆದರೆ ಬಿಜೆಪಿ ಪ್ರತಿಭಟನೆ ಹಿನ್ನಲೆಯಲ್ಲಿ ಏಲ್ಕಾನ-ಕನ್ಯಪ್ಪಾಡಿ ದಾರಿಯಾಗಿ ಕಾರ್ಯಕ್ರಮಕ್ಕೆ ಆಗಮಿಸಿದರು.
ಬಳಿಕ ಕಾರ್ಯಕ್ರಮ ಸ್ಥಳಕ್ಕೆ ಬಿಜೆಪಿ ಕಾರ್ಯಕರ್ತರು ಪ್ರತಿಭಟನಾ ಮೆರವಣಿಗೆ ನಡೆಸಿದರೂ, ಅರ್ಧ ಕಿ ಮೀ ದೂರದಲ್ಲಿ ಪೊಲೀಸರು ಅವರನ್ನು ತಡೆದ ಘಟನೆ ನಡೆಯಿತು. ಬಿಜೆಪಿ ಜಿಲ್ಲಾ ಕಾರ್ಯದರ್ಶಿ ವೇಲಾಯುಧನ್, ಬಾಲಕೃಷ್ಣ ಶೆಟ್ಟಿ, ಸುಧಾಮ ಗೋಸಾಡ, ಸತೀಶ್ಚಂದ್ರ ಮತ್ತಿತರರು ಪ್ರತಿಭಟನೆಯ ನೇತೃತ್ವ ವಹಿಸಿದ್ದರು.