ಬೆಂಗಳೂರು, ನ26(SS): ಸ್ಯಾಂಡಲ್ ವುಡ್ ರೆಬಲ್ ಸ್ಟಾರ್ ಅಂಬರೀಶ್ ಅವರ ಸಾವಿನಿಂದ 'ಕನ್ವರ್' ಮತ್ತು 'ಬುಲ್ ಬುಲ್' ಹೆಸರಿನ ಶ್ವಾನಗಳು ಕಂಗಾಲಾಗಿದೆ.
ಅಂಬರೀಶ್ ಅವರು 'ಕನ್ವರ್' ಮತ್ತು 'ಬುಲ್ ಬುಲ್' ಹೆಸರಿನ 2 ಶ್ವಾನಗಳನ್ನು ಬಹಳ ಪ್ರೀತಿಯಿಂದ ಸಾಕಿದ್ದರು. ಆದರೆ ಇದೀಗ ಅಂಬರೀಶ್ ಸಾವಿನಿಂದ ಎರಡೂ ನಾಯಿಗಳು ಕಂಗಾಲಾಗಿದೆ. ಅಂಬರೀಶ್ ತಾವು ಸಾಕಿದ್ದ ಮುದ್ದಿನ ನಾಯಿಗಳಿಗೆ 'ಕನ್ವರ್' ಮತ್ತು 'ಬುಲ್ ಬುಲ್' ಎಂದು ಹೆಸರಿಟ್ಟಿದ್ದರು. ಗಂಡು ನಾಯಿ ಕನ್ವರ್' ಆದರೆ, ಹೆಣ್ಣು ನಾಯಿಯನ್ನು'ಬುಲ್ ಬುಲ್' ಎಂದು ಕರೆಯುತ್ತಿದ್ದರು.
ಇದೀಗ ಈ 2 ನಾಯಿಗಳನ್ನು ಜೆ.ಪಿ.ನಗರದ ಅಂಬಿ ಮನೆಯಿಂದ ಸಮೀಪದಲ್ಲೇ ಇರುವ ಸುಮಲತಾ ತಾಯಿ ಮನೆಗೆ ಕರೆದುಕೊಂಡು ಹೋಗಲಾಗಿದೆ.
ಶ್ವಾನಗಳಿಗೆ ಏನಾಗಿದೆ ಎಂದು ಗೊತ್ತಾಗುತ್ತಿಲ್ಲ. ಆದರೆ ಅವುಗಳು ತುಂಬಾ ಅಳುತ್ತಿದ್ದವು. ಮಾತ್ರವಲ್ಲ ಶನಿವಾರ ರಾತ್ರಿಯಿಂದ ಇವೆರೆಡೂ ತುಂಬಾ ಗೋಳಾಡುತ್ತಿದ್ದವು ಎಂದು ಕುಟುಂಬಕ್ಕೆ ಹತ್ತಿರವಿದ್ದವರು ತಿಳಿಸಿದ್ದಾರೆ.