ಬೆಂಗಳೂರು, ನ 26(SM): ಕೇಂದ್ರದ ಮಾಜಿ ಸಚಿವ ಜಾಫರ್ ಷರೀಫ್ ಅವರ ಅಂತ್ಯಕ್ರಿಯೆ ಮಿಲ್ಲರ್ಸ್ ರಸ್ತೆಯಲ್ಲಿರುವ ಸ್ಮಶಾನದಲ್ಲಿ ನೆರವೇರಿಸಲಾಯಿತು. ಜಾಫರ್ ಷರೀಫ್ ನಿಧನ ಹಿನ್ನೆಲೆ ನಂದಿದುರ್ಗಾ ರಸ್ತೆಯ ಖುದ್ರುಸ್ ಜುಮ್ಮಾ ಮಸೀದಿಯಲ್ಲಿ ಪಾರ್ಥಿವ ಶರೀರವಿಟ್ಟು ವಿಶೇಷ ಪ್ರಾರ್ಥನೆ ಸಲ್ಲಿಸಲಾಯಿತು.
ಸಚಿವ ಯುಟಿ ಖಾದರ್, ಎಐಸಿಸಿ ಮುಖಂಡ ಗುಲಾಮ್ ನಬಿ ಆಜಾದ್, ಸಚಿವ ಜಮೀರ್ ಅಹಮದ್, ರಿಜ್ವಾನ್ ಅರ್ಷದ್ ಶಾಸಕ ಎಸ್ಆರ್ ವಿಶ್ವನಾಥ್ ಉಪಸ್ಥಿತರಿದ್ದರು.
ಇನ್ನು ನಮಾಜ್ ವೇಳೆ ನೂಕುನುಗ್ಗಲು ಉಂಟಾಗಿದ್ದ ಕಾರಣ ಮುಖ್ಯಮಂತ್ರಿ ಎಚ್ಡಿ ಕುಮಾರಸ್ವಾಮಿ ಡಿಸಿಪಿಯನ್ನು ಸ್ಥಳದಲ್ಲೇ ತರಾಟೆಗೆ ತೆಗೆದುಕೊಂಡರು. ಜಾಫರ್ ಷರೀಫ್ ಪಾರ್ಥಿವ ಶರೀರದ ಮುಂದೆ ಸಾಮೂಹಿಕ ಪ್ರಾರ್ಥನೆ ಸಲ್ಲಿಸಲಾಯಿತು.