ಉಡುಪಿ, ನ 26(SM): ಕರಾವಳಿಯಲ್ಲಿ ಮರಳು ಸಮಸ್ಯೆ ತೀವ್ರಗೊಂಡಿದ್ದು, ಮರಳುಗಾರಿಕೆ ಆರಂಭಿಸುವಂತೆ ಆಗ್ರಹಗಳು ಹೆಚ್ಚುತ್ತಿವೆ. ಈ ನಡುವೆ ಸೋಮವಾರದಂದು ಉಡುಪಿ ಶಾಸಕ ರಘುಪತಿ ಭಟ್ ಮರಳುಗಾರಿಕೆಯ ಸಮಸ್ಯೆ ಪರಿಹರಿಸುವಂತೆ ವಿಚಾರವಾಗಿ ಕೇಂದ್ರದ ಸಚಿವರುಗಳನ್ನು ಭೇಟಿಯಾಗಿದ್ದಾರೆ.
ಸಿ.ಆರ್.ಝಡ್. ವ್ಯಾಪ್ತಿಯ ಮರಳುಗಾರಿಕೆಯ ಮರಳು ದಿಬ್ಬ ತೆರವುಗೊಳಿಸುವ ಬಗ್ಗೆ ರಾಜ್ಯ ಸರಕಾರಕ್ಕೆ ನೀಡುವ ಸ್ಪಷ್ಟೀಕರಣದ ಕುರಿತು ಜಿಲ್ಲೆಯ ಎಲ್ಲಾ ಶಾಸಕರು ಭೇಟಿ ಮಾಡಿದ್ದರು. ಇದರ ಮುಂದುವರಿದ ಭಾಗವಾಗಿ ಇಂದು ಶಾಸಕರು ಕೇಂದ್ರ ಸಚಿವ ಡಿವಿ ಸದಾನಂದ ಗೌಡರನ್ನು ಭೇಟಿಯಾಗಿ ಅವರ ಮೂಲಕ ಅರಣ್ಯ ಮತ್ತು ಪರಿಸರ ಇಲಾಖೆಯ ಜಂಟಿ ಕಾರ್ಯದರ್ಶಿಯಾದಂತಹ ರಿತೇಶ್ ಕುಮಾರ್ ಸಿಂಗ್ ಹಾಗೂ ಕಾರ್ಯದರ್ಶಿಯಾದಂತಹ ಹಾರ್ಧಿಕ್ ಶಹಾರವರನ್ನು ಭೇಟಿಯಾಗಿ ಸ್ಪಷ್ಟೀಕರಣ ಇಡುವ ಬಗ್ಗೆ ಚರ್ಚಿಸಿ ನಾಳೆಯ ಒಳಗೆ ಸ್ಪಷ್ಟೀಕರಣವನ್ನು ನೀಡುವ ಬಗ್ಗೆ ಮನವಿ ಮಾಡಿಕೊಂಡರು.