ಬೆಂಗಳೂರು, ನ 27(MSP): ಹವಾಮಾನ ಬದಲಾಗಿದ್ದರಿಂದ ಅಂಬರೀಶ್ ಆರೋಗ್ಯದಲ್ಲಿ ಮೂರ್ನಾಲ್ಕು ದಿನಗಳಿಂದ ಏರುಪೇರು ಕಂಡು ಬಂದಿತ್ತು. ಆದರೆ ದಿಢೀರನೆ ಕಾರ್ಡಿಯಾಕ್ ಆಟ್ಯಾಕ್ ಆಗಿದ್ದು ಏಕೆ ಎಂಬ ಪ್ರಶ್ನೆಗೆ ನನ್ನ ಬಳಿಯೂ ಉತ್ತರವಿಲ್ಲ ಎಂದು ವಿಕ್ರಂ ಆಸ್ಪತ್ರೆಯ ಡಾ.ಸತೀಶ್ ಹೇಳಿದರು.
ಬಸವೇಶ್ವರ ವೃತ್ತದ ಬಳಿಯ ಫ್ಲಾಟ್ ನಲ್ಲಿ ಅಂಬರೀಶ್ ಹಾಗೂ ಪತ್ನಿ ಸುಮಲತಾ ಉಳಿದುಕೊಂಡಿದ್ದರು. ಅವರ ಮನೆಯಿಂದ ಆಸ್ಪತ್ರೆಗೆ ಇರುವ ದೂರ ಕೇವಲ ೫ ನಿಮಿಷದ ದಾರಿಯಷ್ಟೇ. ಅವರ ಜತೆ ವಿಕ್ರಮ್ ಆಸ್ಪತ್ರೆಯಿಂದ ನೇಮಿಸಿದ್ದ ನುರಿತ ಶುಶ್ರೂಷಕರೊಬ್ಬರು ಇದ್ದರು.
ಶನಿವಾರ ಸಂಜೆ ಅವರಿಗೆ ಕಾರ್ಡಿಯಾಕ್ ಅಟ್ಯಾಕ್ ಆಗಿತ್ತು. ದೂರವಾಣ್ ಕರೆ ಮಾಡಿದ್ದ ಅಂಬರೀಶ್ ಅವರ ಪತ್ನಿ ಸುಮಲತಾ ಜೋರಾಗಿ ಅಳುತ್ತಾ ಮಾಹಿತಿ ನೀಡಿದರು. ನಾನು ಕೂಡಲೇ ಶುಶ್ರೂಷಕರೊಂದಿಗೆ ಪೋನ್ ನಲ್ಲಿ ಮಾತನಾಡಿ, ಆಕ್ಸಿಜನ್ ಹೆಚ್ಚಳ ಮಾಡಿ ಕಾರ್ಡಿಯಾಕ್ ಮಸಾಜ್ ಮಾಡಲು ಹೇಳಿದೆ. ಪ್ರಥಮ ಚಿಕಿತ್ಸೆ ನೀಡದರೂ ಪ್ರಯೋಜನವಾಗಿರಲಿಲ್ಲಿ. ತಕ್ಷಣವೇ ಆಸ್ಪತ್ರೆಯಿಂದಲೇ ಆಂಬುಲೆನ್ಸ್ ಕಳುಹಿಸಿ ಅವರನ್ನು ಆಸ್ಪತೆಗೆ ಕರೆಸಿಕೊಳ್ಳಲಾಯಿತು. ಆದರೆ ಅಷ್ಟು ಹೊತ್ತಿಗೆ ದೇಹ ತಣ್ಣಗಾಗಿತ್ತು ಎಂದು ವಿಷಾದ ವ್ಯಕ್ತಪಡಿಸುತ್ತಾರೆ ವೈದ್ಯರು.