ಮಂಗಳೂರು ನ 28(MSP): ರಾಜ್ಯದ ಕರಾವಳಿಯ ನಾಲ್ಕು ನಗರಗಳ ನೀರು ಸರಬರಾಜು ಯೋಜನೆಗೆ ಏಷ್ಯನ್ ಡೆವಲಪ್ ಮೆಂಟ್ ಬ್ಯಾಂಕ್ ಸುಮಾರು 532 ಕೋಟಿ ರೂಪಾಯಿ ಸಾಲ ಮಂಜೂರು ಮಾಡಿದೆ.
ಮಂಗಳೂರು, ಪುತ್ತೂರು ಉಡುಪಿ, ಕುಂದಾಪುರ ನಗರಗಳ ನಿರಂತರ ನೀರು ಪೂರೈಕೆಗೆ ಈ ಸಾಲವನ್ನು ಬಳಕೆ ಮಾಡಲಾಗುತ್ತಿದೆ.ಈ ನಿಧಿಯಡಿ ಮಂಗಳೂರು ನೈರ್ಮಲ್ಯ ಸುಧಾರಣೆ ಮೂಲಸೌಕರ್ಯ ಕಾಮಗಾರಿ ಕೈಗೆತ್ತಿಕೊಳ್ಳಬೆಕು ಎಂದು ಎಡಿಬಿಯ ಪ್ರಕಟಣೆ ತಿಳಿಸಿದೆ.
ಮಂಗಳವಾರ ಎರಡನೇ ಹಂತದ ಸಾಲ ಮಂಜೂರಾತಿ ಒಪ್ಪಂದಕ್ಕೆ ಸಹಿ ಮಾಡಲಾಗಿದೆ.