ಕಾಸರಗೋಡು ಅ 16 :ಕೇಂದ್ರ ಹಾಗೂ ರಾಜ್ಯ ಸರಕಾರಗಳ ಆಡಳಿತ ವೈಫಲ್ಯ ಹಾಗೂ ಪೆಟ್ರೋಲ್,ಡೀಸೆಲ್ ಉತ್ಪನ್ನಗಳ ಬೆಲೆಯೇರಿಕೆಯನ್ನು ಪ್ರತಿಭಟಿಸಿ ಕೇರಳದಲ್ಲಿ ವಿರೋಧ ಪಕ್ಷ ಯುಡಿಎಫ್ ಕರೆನೀಡಿರುವ ಹರತಾಳದ ಬೆನ್ನಲ್ಲೇ , ಸಿಪಿಎಂ ಕಚೇರಿ ಮೇಲೆ ದುಷ್ಕರ್ಮಿಗಳು ದಾಳಿ ನಡೆಸಿದ ಘಟನೆ ನಡೆದಿದ್ದು , ದ್ವಜ ಮತ್ತು ದ್ವಜ ಸ್ತಂಭ ವನ್ನು ಹಾನಿಗೊಳಿಸಲಾಗಿದೆ.
ಕಾಸರಗೋಡು ನಗರ ಹೊರವಲಯದ ಅಡ್ಕತ್ತಬೈಲ್ ಕೋಟೆ ಹಿತ್ತಿಲಿನಲ್ಲಿರುವ ಸಿಪಿಎಂ ಬ್ರಾಂಚ್ ಕಚೇರಿ ಮೇಲೆ ಕರಿ ಆಯಿಲ್ ಎರಚಿರುವ ತಂಡವು ಸಾಮಾಗ್ರಿಗಳನ್ನು ಧ್ವಂಸಗೊಳಿಸಿದೆ .ನೆಲ್ಲಿಕುಂಜೆ ಕುದಿರು ಬ್ರಾಂಚ್ ಕಚೇರಿ ಮುಂಭಾಗದ ದ್ವಜ ಮತ್ತು ದ್ವಜ ಸ್ತಂಭವನ್ನು ಹಾನಿಗೊಳಿಸಿದೆ. ಘಟನಾ ಸ್ಥಳಕ್ಕೆ ಆಗಮಿಸಿರುವ ಪೊಲೀಸರು ತನಿಖೆ ನಡೆಸುತ್ತಿದ್ದಾರೆ.