ಬೆಂಗಳೂರು, ನ 28(SM): 2019ರ ಮಾರ್ಚ್-ಎಪ್ರಿಲ್ ನಲ್ಲಿ ನಡೆಯುವ ಎಸ್ ಎಸ್ ಎಲ್ ಸಿ ಪರೀಕ್ಷೆಗೆ ಹಾಜರಾಗುವ ವಿದ್ಯಾರ್ಥಿಗಳು ರಿಸ್ಟ್ ವಾಚ್ ಗಳನ್ನು ಧರಿಸುವಂತಿಲ್ಲ.
ಇತ್ತೀಚಿನ ದಿನಗಳಲ್ಲಿ ಆಧುನಿಕ ಶೈಲಿಯ ಕೈಗಡಿಯಾರಗಳು ಮಾರುಕಟ್ಟೆಗೆ ಎಂಟ್ರಿ ನೀಡುತ್ತಿವೆ. ಅವುಗಳಲ್ಲಿ ಕೆಲವೊಂದರಲ್ಲಿ ರೆಕಾರ್ಡಿಂಗ್ ವ್ಯವಸ್ಥೆಯನ್ನು ಹೊಂದಿರುವ ವಾಚ್ ಗಳಿರುತ್ತವೆ. ಈ ಹಿನ್ನೆಲೆಯಲ್ಲಿ ಕರ್ನಾಟಕ ರಾಜ್ಯ ಮಾಧ್ಯಮಿಕ ಶಿಕ್ಷಣ ಮಂಡಳಿ ರಿಸ್ಟ್ ವಾಚ್ ಗಳಿಗೆ ನಿಷೇಧ ಹೇರಿದೆ.
ಬದಲಿಗೆ ಪರೀಕ್ಷೆ ಬರೆಯುವಂತಹ ವಿದ್ಯಾರ್ಥಿಗಳಿಗೆ ನೆರವಾಗಲು ಪ್ರತಿಯೊಂದು ಕೊಠಡಿಗಳಲ್ಲೂ ಗಡಿಯಾರಗಳನ್ನು ಅಳವಡಿಸಲು ತೀರ್ಮಾನಿಸಿದೆ. ಹಾಗೂ ಪರೀಕ್ಷಾ ವೇಳಾಪಟ್ಟಿ ಅಂತಿಮವಾದ ಬಳಿಕ ಎಲ್ಲಾ ಕೇಂದ್ರಗಳಿಗೆ ಈ ಸಂಬಂಧ ಸುತ್ತೋಲೆ ಹೊರಡಿಸಲು ಮಂಡಳಿ ತೀರ್ಮಾನಿಸಿದೆ.