ನವದೆಹಲಿ, ನ 29 (MSP): ನೋಟು ರದ್ದತಿ ನಂತರ ಪರಿಚಯಿಸಲಾದ ಹೊಸ ನೋಟುಗಳು ಹೆಚ್ಚು ಸುರಕ್ಷತಾ ವೈಶಿಷ್ಟ್ಯಗಳನ್ನು ಹೊಂದಿದ್ದರೂ, ಇದೆಲ್ಲವನ್ನೂ ಹೊರತುಪದಿಸಿ ನೋಟು ಬಹು ಬೇಗನೆ ಹಾಳಾಗುತ್ತಿದೆ ಎಂಬ ದೂರುಗಳು ಕೇಳಿಬರತೊಡಗಿದೆ.
ಹಳೆಯ ನೋಟುಗಳನನ್ನು ಬದಲಾವಣೆ ಮಾಡಿದ ಬಳಿಕ ಹೊಸ ನೋಟುಗಳ ಮುದ್ರಣಕ್ಕೆ ಬಳಸಲಾಗುತ್ತಿರುವ ಪೇಪರ್ನ ಗುಣಮಟ್ಟ ಹಿಂದಿನ ನೋಟುಗಳ ಪೇಪರ್ ಗುಣಮಟ್ಟಕ್ಕಿಂತ ತೀರಾ ಕಳಪೆಯಾಗಿರುವುದೇ ಇದಕ್ಕೆ ಕಾರಣ ಎಂದು ರಾಷ್ಟ್ರೀಯ ಮಾದ್ಯಮವೊಂದು ವರದಿ ಮಾಡಿದೆ.
ಇನ್ನು 2000 ರೂ. ಮತ್ತು 500 ರೂ. ಮುಖಬೆಲೆಯ ನೋಟುಗಳನ್ನು ಬಿಟ್ಟು, 2018ರಲ್ಲಿ ಪರಿಚಯಿಸಲಾಗಿದ್ದ ೫೦,೧೦ ರ ನೋಟುಗಳು ಹೆಚ್ಚು ಕಾಲ ಬಳಸಲಾಗುತ್ತಿಲ್ಲ ಎನ್ನುವ ಆರೋಪಗಳು ಕೇಳಿಬರುತ್ತಿದೆ. ಆದರೆ ಇದನ್ನು ನಿರಾಕರಿಸಿರುವ ಸರ್ಕಾರವೂ ಹೊಸ ನೋಟುಗಳನ್ನು ಹೆಚ್ಚಿನ ಸುರಕ್ಷತಾ ವೈಶಿಷ್ಟ್ಯಗಳು ಹೊಂದಿದೆ ಎಂದು ಹೇಳಿಕೊಂಡಿದೆ. ಹಣಕಾಸು ಸಚಿವಾಲಯದ ಬ್ಯಾಂಕಿಂಗ್ ವಿಭಾಗದ ಹಿರಿಯ ಅಧಿಕಾರಿಯೊಬ್ಬರು, ಪ್ರತಿಕ್ರಿಯಿಸಿ ನೋಟನ್ನು ಜನರು ಸಮರ್ಥವಾಗಿ ಬಳಸಬೇಕು. ಅದರ ಬದಲು ನೋಟುಗಳನ್ನು ಹೇಗೆ ಬೇಕೋ ಹಾಗೆ ಅಥವಾ ಪಂಚೆ ಸೀರೆಯಲ್ಲಿ ಗಂಟು ಹಾಕಿ ಇಟ್ಟುಕೊಳ್ಳುವುದು ಸಲ್ಲದು. ಈ ರೀತಿ ಅಸರ್ಮಥವಾಗಿ ನೋಟುಗಳನ್ನು ಇಟ್ಟುಕೊಳ್ಳುವುದರಿಂದ ಹೊಸ ಮುಖಬೆಲೆಯ ನೋಟುಗಳು ಬಹುಬೇಗನೇ ಹಾಳಾಗುತ್ತಿವೆ ಎಂದಿದ್ದಾರೆ.