ಪುತ್ತೂರು, ನ 29 (MSP): ಪುತ್ತೂರು ಕ್ಷೇತ್ರದ ಮಾಜಿ ಶಾಸಕಿ ಶಕುಂತಲಾ ಶೆಟ್ಟಿ, ಕಾಂಗ್ರೆಸ್ ನಾಯಕಿ ಅವರು ಬುರ್ಖಾ ಧರಿಸಿ ಪೋಟೋಗೆ ಪೋಸು ನೀಡಿದ ವಾಯಾಚಿತ್ರವೊಂದು ಇದೀಗ ಸಾಮಾಜಿಕ ಜಾಲತಾಣದಲ್ಲಿ ಸಖತ್ ವೈರಲ್ ಆಗಿದೆ. ಇನ್ನು ಮಾಜಿ ಶಾಸಕಿ ಶಕುಂತಲಾ ಶೆಟ್ಟಿ ಮಾತ್ರ ಬುರ್ಖಾಧಾರಿಯಾಗದೆ ಪುತ್ತೂರಿನ ಇತರ ಮಹಿಳಾ ಕಾಂಗ್ರೇಸ್ ಪಕ್ಷದ ಪದಾಧಿಕಾರಿಗಳೂ ಈ ಪೋಟೋಗಳಲ್ಲಿ ಬುರ್ಖಾಧಾರಿಗಳಾಗಿದ್ದಾರೆ.
ಇನ್ನು ದುಬೈ ನಲ್ಲಿ ನಡೆದ ಸಮ್ಮೇಳನಕ್ಕೆ ತೆರಳಿದ ಸಂದರ್ಭದ ಪೋಟೋ ಇದಾಗಿದೆ. ಈ ಚಿತ್ರದಲ್ಲಿ ಮಾಜಿ ಶಾಸಕಿ ಹಣೆಗೆ ಬಿಂದಿ, ತಲೆಗೆ ಕೇಸರಿ ಶಾಲು ಕಪ್ಪು ಬುರ್ಖಾ ಧರಿಸಿ ಪೋಸ್ ನೀಡಿದ್ದಾರೆ. ಇನ್ನು ಈ ಬಗ್ಗೆ ಸ್ಪಷ್ಟನೆಯನ್ನು ನೀಡಿರುವ ಪುತ್ತೂರಿನ ಕಾಂಗ್ರೆಸ್ ಮುಖಂಡರು ”ಗಲ್ಫ್ ರಾಷ್ಟ್ರಗಳ ಕೆಲವು ಪ್ರದೇಶಗಳಲ್ಲಿ ಬುರ್ಖಾ ಹಾಕುವುದು ಕಡ್ಡಾಯ. ಈ ಹಿನ್ನಲೆಯಲ್ಲಿ ಶಕುಂತಲಾ ಶೆಟ್ಟಿ ಕೂಡಾ ಅಲ್ಲಿನ ಕಾನೂನು ಪ್ರಕಾರ ಬುರ್ಖಾ ತೊಟ್ಟಿದ್ದಾರೆ” ಎಂದಿದ್ದಾರೆ.
ಅಂದ ಹಾಗೆ ಅಬುದಾಬಿಯ ವಿಶ್ವಪ್ರಸಿದ್ದ ಶೇಖ್ ಜಾಯೆದ್ ಗ್ರಾಂಡ್ ಮಸೀದಿ ಭೇಟಿ ನೀಡಬೇಕಾದರೆ ಅಲ್ಲಿ ಮಹಿಳೆಯರಿಗೆ ಬುರ್ಖಾ ಕಡ್ಡಾಯವಾಗಿದೆ.