ಮಂಗಳೂರು,ನ 29 (MSP): ಮಂಗಳೂರು ಸೆಂಟ್ರಲ್ ರೈಲು ನಿಲ್ದಾಣವನ್ನು ಉನ್ನತೀಕರಿಸಿ ವಿಶ್ವದರ್ಜೆಗೆ ಏರಿಸುವ ಪ್ರಕ್ರಿಯೆಗೆ ಚಾಲನೆ ದೊರಕಿದೆ ಎಂದು ಸಂಸದ ನಳಿನ್ ಕುಮಾರ್ ಕಟೀಲು ಹೇಳಿದರು. ಇದರ ಸಲುವಾಗಿ ಒಂದನೇ ಹಂತವಾಗಿ 4 ಕೋ.ರೂ.ಗಳ ಅಭಿವೃದ್ಧಿ ಯೋಜನೆಗಳನ್ನು ಕೈಗೆತ್ತಿಕೊಳ್ಳಲಾಗಿದೆ ಎಂದರು
ಜಿ.ಪಂ.ನಲ್ಲಿ ಬುಧವಾರ ನಡೆದ ರೈಲ್ವೇ ಅಭಿವೃದ್ಧಿ ಸಮಿತಿ ಸಭೆಯಲ್ಲಿ ಮಾತನಾಡಿದ ಅವರು ನಗರದ ಸೆಂಟ್ರಲ್ ರೈಲು ನಿಲ್ದಾಣದಲ್ಲಿ ಇನ್ನೊಂದು ಪ್ರವೇಶ ದ್ವಾರ ಜತೆಗೆ ಇತರ ಹಲವು ಅಭಿವೃದ್ಧಿ ಚಟುವಟಿಕೆಗಳು ಜಾರಿಯಾಗಲಿವೆ ಎಂದರು.
ಇದೇ ವೇಳೆ ಮಾತನಾಡಿದ ರೈಲ್ವೇ ಅಭಿವೃದ್ಧಿ ಸಮಿತಿಯ ಹನುಮಂತ ಕಾಮತ್ , ಸೆಂಟ್ರಲ್ ರೈಲು ನಿಲ್ದಾಣದಲ್ಲಿ 4ನೇ ಪ್ಲಾಟ್ಫಾರಂ ನಿರ್ಮಾಣಕ್ಕಾಗಿ 7.5 ಕೋ.ರೂ. ಬಿಡುಗಡೆಯಾಗಿದೆ ಆದರೆ ರೈಲ್ವೇ ಅಧಿಕಾರಿಗಳು ಪಿಟ್ಲೈನ್ ನನ್ನು ಸ್ಥಳಾಂತರಿಸದೆ 4 ಹಾಗೂ 5ನೇ ಪ್ಲಾಟ್ಫಾರಂ ನಿರ್ಮಿಸಲು ಸಾಧ್ಯವಿಲ್ಲ. ಹಲವು ಕಾಲದಿಂದ ಹಾಗೆಯೇ ಬಾಕಿಯಾಗಿರುವ ಈ ಯೋಜನೆ ಪಿಟ್ಲೈನ್ ಇನ್ನು ಕೂಡಾ ಅನುದಾನದಕ್ಕಾಗಿ ಇನ್ನು ಎಷ್ಟು ವರ್ಷ ಎದುರುನೋಡಬೇಕು ಎಂದು ಪ್ರಶ್ನಿಸಿದರು. ಈ ಬಗ್ಗೆ ರೈಲ್ವೇ ಅಧಿಕಾರಿಗಳು ಸಾಧ್ಯತಾ ವರದಿ ಸಿದ್ಧಪಡಿಸಿ ನೀಡುವಂತೆ ನಳಿನ್ ಸೂಚಿಸಿದರು.
ಇದಲ್ಲದೆ ಸಭೆಯಲ್ಲಿ ಕೇರಳ ರೈಲಿಗೆ ಆದ್ಯತೆ ನೀಡಿದ್ದಾಕ್ಕೆ ಆಕ್ಷೇಪ ವ್ಯಕ್ತವಾಯಿತು. ಇನ್ನು ಸ್ಮಾರ್ಟ್ ಸಿಟಿಯಲ್ಲಿ ಜೆಪ್ಪು ಮಹಾಕಾಳಿಪಡ್ಪುವಿನಲ್ಲಿ ರೈಲ್ವೇ ಕೆಳಸೇತುವೆಗೆ ಅನುಮೋದನೆ ದೊರಕಿದ್ದು , ಇದೇ ಅನುದಾನದಿಂದ 40೦ ಕೋಟಿ ರೂ. ಬಿಡುಗಡೆ ಮಾಡಲು ತೀರ್ಮಾನಿಸಲಾಗಿದೆ ಎಂದು ಮನಪಾ ಆಯುಕ್ತ ಮಹಮ್ಮದ್ ನಜೀರ್ ಮಾಹಿತಿ ನೀಡಿದರು.