ಬೆಂಗಳೂರು, ನ 29(SM): ಹೆಜಮಾಡಿ ಮತ್ತು ಸಾಸ್ತಾನ ಟೋಲ್ಗೇಟ್ನಲ್ಲಿ ಸ್ಥಳೀಯರಿಗೆ ವಿನಾಯಿತಿ ನೀಡುವಂತೆ ಆಗ್ರಹಿಸಿ ಉಡುಪಿ ಜಿಲ್ಲಾ ಉಸ್ತುವಾರಿ ಸಚಿವೆ ಜಯಮಾಲಾ, ಲೋಕೋಪಯೋಗಿ ಸಚಿವ ರೇವಣ್ಣ ಜತೆ ವಿಧಾನಸೌಧದಲ್ಲಿ ಇಂದು ನಡೆಸಿದ ಸಭೆ ವಿಫವಾಗಿದೆ. ಟೋಲ್ ವಸೂಲಿ ಪ್ರಾರಂಭಿಸುದು ಮತ್ತು ಸ್ಥಗಿತಗೊಳಿಸುವ ಅಧಿಕಾರ ರಾಜ್ಯ ಸರ್ಕಾರದ ಕೈಯಲಿ ಇಲ್ಲ ಎನ್ನುವ ಉತ್ತರವನ್ನು ಸಭೆಯಲ್ಲಿ ರೇವಣ್ಣ ನೀಡಿದ್ಧಾರೆ.
ಆದರೆ ಉಸ್ತುವಾರಿ ಸಚಿವೆ ಜಯಮಾಲರವರು ಅಸಮರ್ಪಕ ಕಾಮಗಾರಿ ಹಾಗೂ ಟೋಲ್ ವಸೂಲಾತಿ ಬಗ್ಗೆ ನವಯುಗದವರ ಬಗ್ಗೆ ತೀವ್ರ ಅಸಮಾಧಾನ ವ್ಯಕ್ತಪಡಿಸಿದರು. ಇನ್ನು ಟೋಲ್ ವಸೂಲಾತಿ ನಿಲ್ಲಿಸಲು ಸರಕಾರದ ವತಿಯಿಂದ ಸೂಚಿಸುವಂತೆ ವಿನಂತಿಸಿದರು. ಆದರೆ ರೇವಣ್ಣ ಇದುಯಾವುದೂ ರಾಜ್ಯ ಸರ್ಕಾರದ ಕೈಯಲ್ಲಿ ಇಲ್ಲ ಎಂದು ತಿಳಿಸಿದರು.
ಸಚಿವರ ಮಾತಿಗೆ ಆಕ್ಷೇಪ ವ್ಯಕ್ತಪಡಿಸಿದ ಕರಾವಳಿಯ ಶಾಸಕರು, ಪೊಲೀಸರು ಕ್ರಮ ಜರುಗಿಸಿದ್ರೂ, ಹೋರಾಟ ನಡೆಸುವ ಎಚ್ಚರಿಕೆ ನೀಡಿದರು. ಮಾತ್ರವಲ್ಲದೆ ಹೊರಜಿಲ್ಲೆಯ ವಾಹನಗಳಿಗೂ ಟೋಲ್ ವಸೂಲಾತಿ ಮಾಡುವುದಕ್ಕೆ ಬಿಡುವುದಿಲ್ಲ ಎನ್ನುವ ಸವಾಲು ಹಾಕಿದರು. ಶಾಸಕರಾದ ರಘುಪತಿ ಭಟ್ ಮತ್ತು ಪ್ರತಿಪಕ್ಷ ನಾಯಕ ಕೋಟಾ ಶ್ರೀನಿವಾಸ್ ಪೂಜಾರಿಯನ್ನು ಉಡುಪಿ ಜಿಲ್ಲಾ ಉಸ್ತುವಾರಿ ಸಚಿವೆ ಜಯಮಾಲಾ ಮನವೊಲಿಸುವ ಪ್ರಯತ್ನಿಸಿ ವಿಫಲರಾದರು. ಬಳಿಕ ಸಭೆಯನ್ನು ಅರ್ಧದಲ್ಲೆ ಮೊಟಕುಗೊಳಿಸಲಾಯಿತು.