ಉಡುಪಿ, ನ 30 (MSP): ಬಾಲಕನ ಮೇಲೆ ಲೈಂಗಿಕ ದೌರ್ಜನ್ಯ ಎಸಗಿದ ಆರೋಪದಲ್ಲಿ, ಪತ್ರಕರ್ತನ ವಿರುದ್ಧ ಫೋಕ್ಸೊ ಕಾಯ್ದೆಯಡಿ ಬಂಧಿಸಲ್ಪಟ್ಟ ಪತ್ರಕರ್ತ ಚಂದ್ರ ಕೆ.ಹೆಮ್ಮಾಡಿಗೆ ಉಡುಪಿ ಸೆಷನ್ಸ್ ಕೋರ್ಟ್ ಗುರುವಾರ 15 ದಿನಗಳ ನ್ಯಾಯಾಂಗ ಬಂಧನ ವಿಧಿಸಿದೆ. ಲೈಂಗಿಕ ದೌರ್ಜನ್ಯ ಎಸಗಿದ ಪ್ರಕರಣ ಸಂಬಂಧ ಒಟ್ಟು ಈತನ ವಿರುದ್ದ 5 ಕೇಸುಗಳು ದಾಖಲಾಗಿವೆ. ಹೆಚ್ಚಿನ ವಿಚಾರಣೆಯನ್ನು ಪೊಲೀಸರು ಆರೋಪಿಯನ್ನು ಕಸ್ಟಡಿಗೆ ಕೇಳುವ ಸಾಧ್ಯತೆ ಇದೆ ಎನ್ನಲಾಗಿದೆ.
ಘಟನೆಯ ವಿವರ:
ದಿನಪತ್ರಿಕೆಯೊಂದರ ಬಿಡಿ ವರದಿಗಾರ ಚಂದ್ರ ಹೆಮ್ಮಾಡಿ ಸುದ್ದಿಯ ನೆಪದಲ್ಲಿ ದಾರಿ ತೋರಿಸುವಂತೆ ಬಾಲಕನನ್ನು ಪುಸಲಾಯಿಸಿ ಕಪ್ಪಾಡಿ, ಮೂರೂರು ಎಂಬಲ್ಲಿನ ಕಾಡಿಗೆ ಕರೆದೊಯ್ದು ನಾಲ್ಕಾರು ಬಾರಿ ದೌರ್ಜನ್ಯ ಎಸಗಿದ್ದ. ಈ ಬಗ್ಗೆ ಬಾಲಕನ ತಂದೆ ಬೈಂದೂರು ಠಾಣೆಗೆ ದೂರು ನೀಡಿದ್ದರು. ಮಾನಸಿಕ ಘಾಸಿಗೊಳಗಾದ ಬಾಲಕ ಮನೆಯಿಂದ ಹೊರ ಹೋಗದ ಕಾರಣ ಸಂಶಯಗೊಂಡ ಮನೆಯವರು ಮಾನಸಿಕ ತಜ್ಞರ ಬಳಿಗೆ ಕರೆದೊಯ್ದಾಗ ವೈದ್ಯರ ಮುಂದೆ ತನಗಾದ ಲೈಂಗಿಕ ಹಲ್ಲೆ ಕುರಿತು ಬಾಲಕ ಹೇಳಿಕೊಂಡಿದ್ದಾನೆ. ಹೀಗಾಗಿ ಘಟನೆ ಬೆಳಕಿಗೆ ಬಂದಿತ್ತು.
ಆರೋಪಿಯು ಇನ್ನೂ ಹಲವು ಬಾಲಕರ ಮೇಲೆ ಲೈಂಗಿಕ ದೌರ್ಜನ್ಯ ನಡೆಸಿದ್ದಾನೆ ಎನ್ನುವ ಆರೋಪ ಕೇಳಿಬಂದಿತ್ತು.