ಮಂಗಳೂರು,ನ 30 (MSP): ವಿಹಾರಕ್ಕೆಂದು ತೋಟ ಬೆಂಗ್ರೆಗೆ ಬಂದಿದ್ದ ಜೋಡಿಯನ್ನು ತಡೆದು ಹಲ್ಲೆ ನಡೆಸಿ ಯುವತಿಯನ್ನು ಅಪಹರಿಸಿ ಸಾಮೂಹಿಕ ಅತ್ಯಾಚಾರವನ್ನು ಖಂಡಿಸಿರುವ ಯುವತಿ ಮೇಲೆ ನಡೆದ ಸಾಮೂಕಿಕ ಅತ್ಯಾಚಾರವನ್ನು ಖಂಡಿಸಿರುವ ರಾಜ್ಯ ಮಹಿಳಾ ಆಯೋಗದ ಅಧ್ಯಕ್ಷೆ ನಾಗಲಕ್ಷ್ಮೀ ಬಾಯಿ , ಹೀನಾ ಕೃತ್ಯ ಎಸಗಿದ ಆರೋಪಿಗಳ ವಿರುದ್ದ ತೆಗೆದುಕೊಂಡಿರುವ ಕ್ರಮದ ಬಗ್ಗೆ ಶೀಘ್ರವೇ ವರದಿ ನೀಡುವಂತೆ ಮಂಗಳೂರು ಪೊಲೀಸ್ ಆಯುಕ್ತರಿಗೆ ಪತ್ರ ಬರೆದಿದ್ದಾರೆ.
ಘಟನೆಯ ವಿವರ
ಮಂಗಳೂರು ಹೊರವಲಯದ ತೋಟ ಬೆಂಗ್ರೆ ಬೀಚ್ ನಲ್ಲಿ ನವೆಂಬರ್ 18ರಂದು ಪ್ರೇಮಿಯೊಂದಿಗೆ ಸುತ್ತಾಡಲು ಬಂದಿದ್ದ ಬಂಟ್ವಾಳ ಮೂಲದ ಯುವತಿಯ ಮೇಲೆ ಏಳು ಮಂದಿ ಕಾಮುಕರು ಸಾಮೂಹಿಕ ಅತ್ಯಾಚಾರ ನಡೆಸಿದ್ದರು.
ಘಟನೆ ಸಂಬಂಧ ಯಾವುದೇ ದೂರು ದಾಖಲಾಗದಿದ್ದರೂ, ವಿಶೇಷ ಮುತುವರ್ಜಿ ವಹಿಸಿ ಪ್ರಕರಣದ ಬೆನ್ನು ಹತ್ತಿದ ಪಣಂಬೂರು ಪೊಲೀಸರು, ಕಠಿಣ ಪರಿಶ್ರಮದ ಮೂಲಕ ಸಾಮೂಹಿಕ ಅತ್ಯಾಚಾರಕ್ಕೆ ಒಳಗಾದ ಸಂತ್ರಸ್ತೆಯನ್ನು ಪತ್ತೆ ಹಚ್ಚಿ ಆಕೆಯ ವಿಶ್ವಾಸ ಗಳಿಸಿ ಕೇಸು ದಾಖಲಿಸುವಂತೆ ಮಾಡುವಲ್ಲಿ ಯಶಸ್ವಿಯಾಗಿದ್ದರು. ಅಲ್ಲದೇ ಘಟನೆ ಸಂಬಂಧ ಎಲ್ಲಾ ಆರೋಪಿಗಳನ್ನು ಪೊಲೀಸರು ಬಂಧಿಸುವಲ್ಲಿ ಯಶಸ್ವಿಯಾಗಿದ್ದರು. ಪಣಂಬೂರು ಠಾಣೆ ಹಾಗೂ ಮಹಿಳಾ ಪೊಲೀಸ್ ಠಾಣೆ ಜಂಟಿಯಾಗಿ ತನಿಖೆ ಮುಂದುವರಿಸಿದೆ. ಮಂಗಳೂರು ಮಹಿಳಾ ಠಾಣೆಯಲ್ಲಿ 7 ಮಂದಿ ಆರೋಪಿಗಳ ವಿರುದ್ದ ಐಪಿಸಿ ಸೆಕ್ಷನ್ 323, 504, 506ರಂತೆ ಪ್ರಕರಣ ದಾಖಲಾಗಿತ್ತು.ಮಂಗಳೂರು ಹೊರವಲಯದ ತೋಟ ಬೆಂಗ್ರೆ ಬೀಚ್ ನಲ್ಲಿ ನವೆಂಬರ್ 18ರಂದು ಪ್ರೇಮಿಯೊಂದಿಗೆ ಸುತ್ತಾಡಲು ಬಂದಿದ್ದ ಬಂಟ್ವಾಳ ಮೂಲದ ಯುವತಿಯ ಮೇಲೆ ಏಳು ಮಂದಿ ಕಾಮುಕರು ಸಾಮೂಹಿಕ ಅತ್ಯಾಚಾರ ನಡೆಸಿದ್ದರು.